ಪೋಸ್ಟ್‌ಗಳು

ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶತಪದಿ

ಇಮೇಜ್
ಮೂಲ: ಜೂಲಿ ಹೋಲ್ಡರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಹಳ ಜೋರಾಗಿ ಓಡಬಲ್ಲದು ಜರಿಹುಳು  ಏಕೆಂದರೆ ಅದಕ್ಕಿವೆ ಇನ್ನೂರು ಕಾಲು ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು  ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು ಉಡುಗೊರೆ ಕೊಟ್ಟರು ಯಾರೋ ಅದಕ್ಕೆ ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು  ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ. ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

ಪಂಡಿತರು

ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ  ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ  ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ ನಾವು ಬರೆದ ಪ್ರತಿ ಪದ ಪ್ರತಿ ಸಾಲು ಇವರ ಕೂಲಂಕಷ ಅವಗಾಹನೆಗೆ ಪಾಲು ತಿದ್ದುವರು ಅದು ಹಾಗಲ್ಲ ಹೀಗೆ ಎಂದು ಮಾಡುತ್ತ ಅವಹಾಲು ಹಲ್ಲು ಕಡಿಯುವರು, ಛೇ ಎಂದು ಹಲುಬುವರು  ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ  ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ. ಕನ್ನಡದ ಭಂಡಾರಕ್ಕೆ ಪಾಲಕರು ಇವರು ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ. ಗರಿಷ್ಠ ಮೂರು ತಪ್ಪುಗಳ ವಿನಾಯಿತಿ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ. ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ  ಆಡಿಸುವರು ಇವರು ಚಕಚಕ ಕತ್ತರಿ ಚಾಕು. ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ ವ್ಯಾಕರಣ ದೋಷ ಇರದಿದ್ದರೆ ಸಾಕು. ಮೂಲ : Brian Bilston  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಜನಪ್ರಿಯ ಸುದ್ದಿ

ಮ್ಯಾಥೆಮ್ಯಾಟಿಕ್ಸ್ ಪೇಪರ್ ಮೂರು ಸಲ ಕಟ್ಟಿದರೂ ಪಾಸಾಗಲಿಲ್ಲ ,ಸ್ಟ್ಯಾಟಿಸ್ಟಿಕ್ಸ್ ಹೋಗಲಿಲ್ಲ ತಲೆಗೆ ಆದರೆ ದೇವರು ಕೊಟ್ಟಿದ್ದಾನೆ ಗಟ್ಟಿ ದನಿ ಚುರುಕು ನಾಲಗೆ ಹೀಗಾಗಿ ಮೀಡಿಯಾದಲ್ಲಿ ಇವರದ್ದೇ ಜೋರು ಒಬ್ಬರನ್ನು ಇಂಟರ್ವ್ಯೂ ಮಾಡಿ ಸಾಕು ಹೆಚ್ಚೆಂದರೆ ಇಬ್ಬರ ಮುಂದೆ ಹಿಡಿ ಮೈಕು  ನಾಳೆಗೆ ಬೇಕಾದ ವರದಿ ಸಂಜೆಗೆ ಬೇಕಾದ ನ್ಯೂಸ್ಉ ಬರೆದು ಜಲ್ದಿ ಜಲ್ದಿ ಹೇಗೋ ಮುಗಿಸಿ ಕಳಿಸು ಜನ ನೋಡುತ್ತಾರೆ ಹೇಗಿದ್ದರೂ ಕಣ್ಮುಚ್ಚಿಕೊಂಡು ಅವರಿಗೆಲ್ಲಿ ಬೇಕಾಗಿದೆ ಯಾವುದು ನಿಜವೆಂದು ಮನರಂಜನೆಗೆ ತಾನೇ ನೋಡುವುದು ಜನ ಹೀಗಾಗಿ ಹುಡುಕು ಏನಾದರೂ ವಿಲಕ್ಷಣ  ಓದುವಾಗ ಕೆಟ್ಟ ಅಣಕುಧ್ವನಿಯಲ್ಲಿ ಓದು  ಮಧ್ಯೆ ಮಧ್ಯೆ ಅವರಿವರನ್ನು ಒಂದಿಷ್ಟು ಬೈದು ಎಷ್ಟು ಗಟ್ಟಿಯಾಗಿ ಹೇಳುತ್ತೀಯೋ ಅಷ್ಟು ನಂಬುತ್ತಾರೆ ಜನ ಜನಪ್ರಿಯತೆಯೇ ಅಲ್ಲವೇ ಸಂಶೋಧನೆಯ ಲಕ್ಷಣ?

ಸ್ಥಿತಪ್ರಜ್ಞೆ

  ಕೇಳಿದೆನು ಕ್ವಾಂಟಂ ಕಂಪ್ಯೂಟರನ್ನು ನಾನು ಇದೆಯೋ ಇಲ್ಲವೋ ಬಾಕ್ಸಿನಲ್ಲಿ ಬೆಕ್ಕು ಕ್ವಾಕಂ ಉತ್ತರಿಸಿತು ಗಹಗಹಿಸಿ ನಕ್ಕು  ಕೇಳಬಾರದ ಪ್ರಶ್ನೆ ಕೇಳಿದೆಯಲ್ಲ ನೀನು ಎರಡು ಕ್ವಾಂಟಂ ಸ್ಥಿತಿಗಳಿವೆ ಮಾಡಿಕೋ ಮನವರಿಕೆ ಒಂದು ಬೆಕ್ಕಿನ ಇರುವಿಕೆ ಇನ್ನೊಂದು ಇಲ್ಲದಿರುವಿಕೆ ಇರುವುದೂ ಇಲ್ಲದಿರುವುದೂ ಒಮ್ಮೆಲೇ ಸಾಧ್ಯ ಚಂಪೂ ಕಾವ್ಯದಲ್ಲಿ ಇರುವಂತೆ ಗದ್ಯ ಮತ್ತು ಪದ್ಯ ಇದೆಯೋ ಇಲ್ಲವೋ ಎಂಬ ಕುತೂಹಲ ನಿನಗೆ ಹೀಗೇ ತೆರೆದಳು ಒಮ್ಮೆ ಪಂಡೋರಾ ಪೆಟ್ಟಿಗೆ ಪೆಟ್ಟಿಗೆ ತೆರೆದು ಏನಿದೆ ಎಂದು ಹೇಳಲೇ ಬೇಕೇ? ಎರಡು ಸ್ಥಿತಿಗಳನ್ನೂ ಇಳಿಸಲೇಬೇಕಾ ಒಂದಕ್ಕೆ? ಏಕೆ ಕೊಲ್ಲುವೆ ಇದ್ದರೂ ಇಲ್ಲದಂತಿರುವ ಬೆಕ್ಕನ್ನು? ಎಂದು ಜಾರಿತು ಕ್ವಾಕಂ, ಧ್ಯಾನಕ್ಕೆ, ಅರೆಮುಚ್ಚಿ ಕಣ್ಣು ಸಿ ಪಿ ರವಿಕುಮಾರ್ (ಇದು ಕನ್ನಡ ವಿಜ್ಞಾನ ನಾಟಕಕಾರ Shashidhara Dongre M ಅವರಿಗೆ)