ಜನಪ್ರಿಯ ಸುದ್ದಿ


ಮ್ಯಾಥೆಮ್ಯಾಟಿಕ್ಸ್ ಪೇಪರ್ ಮೂರು ಸಲ ಕಟ್ಟಿದರೂ

ಪಾಸಾಗಲಿಲ್ಲ ,ಸ್ಟ್ಯಾಟಿಸ್ಟಿಕ್ಸ್ ಹೋಗಲಿಲ್ಲ ತಲೆಗೆ

ಆದರೆ ದೇವರು ಕೊಟ್ಟಿದ್ದಾನೆ ಗಟ್ಟಿ ದನಿ ಚುರುಕು ನಾಲಗೆ

ಹೀಗಾಗಿ ಮೀಡಿಯಾದಲ್ಲಿ ಇವರದ್ದೇ ಜೋರು


ಒಬ್ಬರನ್ನು ಇಂಟರ್ವ್ಯೂ ಮಾಡಿ ಸಾಕು

ಹೆಚ್ಚೆಂದರೆ ಇಬ್ಬರ ಮುಂದೆ ಹಿಡಿ ಮೈಕು 

ನಾಳೆಗೆ ಬೇಕಾದ ವರದಿ ಸಂಜೆಗೆ ಬೇಕಾದ ನ್ಯೂಸ್ಉ

ಬರೆದು ಜಲ್ದಿ ಜಲ್ದಿ ಹೇಗೋ ಮುಗಿಸಿ ಕಳಿಸು


ಜನ ನೋಡುತ್ತಾರೆ ಹೇಗಿದ್ದರೂ ಕಣ್ಮುಚ್ಚಿಕೊಂಡು

ಅವರಿಗೆಲ್ಲಿ ಬೇಕಾಗಿದೆ ಯಾವುದು ನಿಜವೆಂದು

ಮನರಂಜನೆಗೆ ತಾನೇ ನೋಡುವುದು ಜನ

ಹೀಗಾಗಿ ಹುಡುಕು ಏನಾದರೂ ವಿಲಕ್ಷಣ 


ಓದುವಾಗ ಕೆಟ್ಟ ಅಣಕುಧ್ವನಿಯಲ್ಲಿ ಓದು 

ಮಧ್ಯೆ ಮಧ್ಯೆ ಅವರಿವರನ್ನು ಒಂದಿಷ್ಟು ಬೈದು

ಎಷ್ಟು ಗಟ್ಟಿಯಾಗಿ ಹೇಳುತ್ತೀಯೋ ಅಷ್ಟು ನಂಬುತ್ತಾರೆ ಜನ

ಜನಪ್ರಿಯತೆಯೇ ಅಲ್ಲವೇ ಸಂಶೋಧನೆಯ ಲಕ್ಷಣ?



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ