ಪಂಡಿತರು


ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ 

ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ

ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ 

ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ


ನಾವು ಬರೆದ ಪ್ರತಿ ಪದ ಪ್ರತಿ ಸಾಲು

ಇವರ ಕೂಲಂಕಷ ಅವಗಾಹನೆಗೆ ಪಾಲು

ತಿದ್ದುವರು ಅದು ಹಾಗಲ್ಲ ಹೀಗೆ

ಎಂದು ಮಾಡುತ್ತ ಅವಹಾಲು


ಹಲ್ಲು ಕಡಿಯುವರು, ಛೇ ಎಂದು ಹಲುಬುವರು 

ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ 

ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ

ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ.


ಕನ್ನಡದ ಭಂಡಾರಕ್ಕೆ ಪಾಲಕರು ಇವರು

ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ.

ಗರಿಷ್ಠ ಮೂರು ತಪ್ಪುಗಳ ವಿನಾಯಿತಿ

ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ.


ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ 

ಆಡಿಸುವರು ಇವರು ಚಕಚಕ ಕತ್ತರಿ ಚಾಕು.

ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ

ವ್ಯಾಕರಣ ದೋಷ ಇರದಿದ್ದರೆ ಸಾಕು.


ಮೂಲ : Brian Bilston 


ಕನ್ನಡಕ್ಕೆ: ಸಿ ಪಿ ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ