ಸ್ಥಿತಪ್ರಜ್ಞೆ

 


ಕೇಳಿದೆನು ಕ್ವಾಂಟಂ ಕಂಪ್ಯೂಟರನ್ನು ನಾನು
ಇದೆಯೋ ಇಲ್ಲವೋ ಬಾಕ್ಸಿನಲ್ಲಿ ಬೆಕ್ಕು
ಕ್ವಾಕಂ ಉತ್ತರಿಸಿತು ಗಹಗಹಿಸಿ ನಕ್ಕು 
ಕೇಳಬಾರದ ಪ್ರಶ್ನೆ ಕೇಳಿದೆಯಲ್ಲ ನೀನು

ಎರಡು ಕ್ವಾಂಟಂ ಸ್ಥಿತಿಗಳಿವೆ ಮಾಡಿಕೋ ಮನವರಿಕೆ
ಒಂದು ಬೆಕ್ಕಿನ ಇರುವಿಕೆ ಇನ್ನೊಂದು ಇಲ್ಲದಿರುವಿಕೆ
ಇರುವುದೂ ಇಲ್ಲದಿರುವುದೂ ಒಮ್ಮೆಲೇ ಸಾಧ್ಯ
ಚಂಪೂ ಕಾವ್ಯದಲ್ಲಿ ಇರುವಂತೆ ಗದ್ಯ ಮತ್ತು ಪದ್ಯ

ಇದೆಯೋ ಇಲ್ಲವೋ ಎಂಬ ಕುತೂಹಲ ನಿನಗೆ
ಹೀಗೇ ತೆರೆದಳು ಒಮ್ಮೆ ಪಂಡೋರಾ ಪೆಟ್ಟಿಗೆ
ಪೆಟ್ಟಿಗೆ ತೆರೆದು ಏನಿದೆ ಎಂದು ಹೇಳಲೇ ಬೇಕೇ?
ಎರಡು ಸ್ಥಿತಿಗಳನ್ನೂ ಇಳಿಸಲೇಬೇಕಾ ಒಂದಕ್ಕೆ?

ಏಕೆ ಕೊಲ್ಲುವೆ ಇದ್ದರೂ ಇಲ್ಲದಂತಿರುವ ಬೆಕ್ಕನ್ನು?
ಎಂದು ಜಾರಿತು ಕ್ವಾಕಂ, ಧ್ಯಾನಕ್ಕೆ, ಅರೆಮುಚ್ಚಿ ಕಣ್ಣು

ಸಿ ಪಿ ರವಿಕುಮಾರ್


(ಇದು ಕನ್ನಡ ವಿಜ್ಞಾನ ನಾಟಕಕಾರ Shashidhara Dongre M ಅವರಿಗೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ