ಪೋಸ್ಟ್‌ಗಳು

ಮೇ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಂಗಳಲಿ ಒಂದು ಕಥನ

ಇಮೇಜ್
ಕಂಗಳಲಿ ಒಂದು ಕಥನ ಒಂದಿಷ್ಟು ಮೋಡ ಒಂದಿಷ್ಟು ನೀರು ಮತ್ತೊಂದು ಕಥನ ನಯನದ್ವಯ ಜಲಧಾರೆಯ ಹರಿಸುತ್ತಿರುವುವು  ಕಿವಿಗೊಡುವಿರೋ ಯಾ ಇಲ್ಲವೋ ಹೇಳುತ್ತಿರುವುವು ವಹಿಸಿದರೂ ಗಹನ ಮೌನ ನಿಂತಾಗ ಕಂಬನಿಧಾರೆಯು, ಮಾತೂ ಮುಗಿವುದು ಮಾತನ್ನು ಕೇಳಿಸಿಕೊಂಡರೆ ಏನೋ ಸಿಗುವುದು ಹಳೆಯದು ಹಾಗೂ ನವೀನ ಇರುಳೊಂದು ಜಾರಿದಕೂಡಲೆ ಇರುಳೇ ಕವಿದಿದೆ ಮರೆತಿರುವ ಯಾವುದೋ ಮಾತು ನಾಲಿಗೆಯ ಮೇಲಿದೆ ನೂರೆಂಟು ನುಡಿವ ನಯನ ಮೂಲ : ಗುಲ್ಜಾರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಚಿತ್ರ: ಮಾಸೂಮ್ 

ನೂರು ವರ್ಷಗಳ ತರುವಾಯ

ಇಮೇಜ್
  ನೂರು ವರ್ಷಗಳ ತರುವಾಯ ನನ್ನ ಕವಿತೆ ಓದುತ್ತ ನಿಂತಿರುವೆ, ಯಾರು ನೀನು? ನಿನಗಾಗಿ ಈ ವಸಂತಸಂಪದದಿಂದ  ಕಳಿಸಲಾರೆ ಒಂದಾದರೂ ಹೂವನ್ನು. ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ ಕಳಿಸಲಾರೆ ಒಂದಾದರೂ ಹೊನ್ನರೇಖೆ. ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ ಕಾಣುವುದು ಮುಗುಳುಗಳ ಹೊತ್ತ ಶಾಖೆ ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ ಮಾಯವಾದ ಕುಸುಮಗಳ ಗಂಧ: ಪ್ರಫುಲ್ಲ ಮನದ ಉದ್ಯಾನದಲ್ಲಿ ಕೇಳಲಿ ನೂರು ವರ್ಷಗಳ ಹಿಂದೆ ಜೀವನಾನಂದದಿಂದ  ಹೀಗೇ ವಸಂತದ ಒಂದು ಸುಂದರ ದಿವಸ ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ. ಮೂಲ: ರವೀಂದ್ರನಾಥ ಟ್ಯಾಗೋರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್