ಪೋಸ್ಟ್‌ಗಳು

ಸೆಪ್ಟೆಂಬರ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಳೆ ಪದ್ಯ

 ಮಳೆ ಪದ್ಯ  ಮಳೆ ಬರುತ್ತಿದೆ, ಹೊಯ್ಯುತ್ತಿದೆ,  ಧೋ ಎಂದು ಸುರಿಯುತ್ತಿದೆ. ಟಪಟಪ ಉದುರುತ್ತಿದೆ. ತುಂತುರು ತುಂತುರಾಗಿ ಒಮ್ಮೆ ಪಟಪಟ ಬೀಳುವ ಹನಿ. ಧಾರಾಕಾರವಾಗಿ ಇನ್ನೊಮ್ಮೆ ದೇವರು ಸುರಿಸಿದಂತೆ ಕಂಬನಿ. ಮುಸಲಧಾರೆಯಾಗಿ ಒಮ್ಮೊಮ್ಮೆ ಓಬವ್ವನ ಒನಕೆ. ಹನಿಹನಿಯಾಗಿ ಒಮ್ಮೊಮ್ಮೆ ತನಿ ಆವರ್ತನೆ ವಿನಿಕೆ. ಜಿನುಗುತ್ತದೆ, ಆಕಾಶಕ್ಕೆ ತೂತು ಬಿದ್ದಂತೆ. ಕೆಲವೊಮ್ಮೆ ಪುಷ್ಪವೃಷ್ಟಿ  ಮಣ್ಣಿನ ಕಂಪು ಮೇಲೆದ್ದಂತೆ. ಕೆಲವೊಮ್ಮೆ ಕುಳಿರ್ಗಾಳಿ ಜೊತೆಯಾಗಿ ಬೆಚ್ಚಗೆ ಕಂಬಳಿ ಹೊದ್ದಂತೆ. ಕದ್ದಿಂಗಳು, ಕಗ್ಗತ್ತಲು, ಕಾರ್ಮೋಡದ ರಾತ್ರಿ ಕೋಲ್ಮಿಂಚು, ಗುಡುಗು, ಸಿಡಿಲುಗಳ ಜೊತೆ. ಹೂ ಬಿಸಿಲಲ್ಲಿ ಕೆಲವೊಮ್ಮೆ ಸಪ್ತವರ್ಣದ ಸ್ವರ್ಣಲತೆ. ಶ್ರಾವಣದ ಬಲ್ಸೋನೆಗೆ ಬೇಸತ್ತ  ಮನೋರಮೆಗೆ ಕತೆ ಕೇಳುವ ಉತ್ಸುಕತೆ. ಗೌರಿ ಹಬ್ಬದ ದಿವಸ  ಬೀಳುವ ಗೌರಿ ಜಡಿ. ಕಾಮದಹನದ ಬಳಿಕ   ತಣಿಸಲು ರತಿಯ ದಳ್ಳುರಿ. ನಂಬಲಾರದ ಚಿತ್ತಾ ಮಳೆ . ತುಂಬಿಕೊಡುವ ಉತ್ತರೆ ಮಳೆ. ಧೈರ್ಯವಾಗಿ ಮುಂದೆಯೇ ಕಾರುವ ಮುಂಗಾರು. ಬೆನ್ನಹಿಂದೆ ಕಾರುವ ಹಿಂಗಾರು. ಕಂಗೊಳಿಸುವ ಹಸಿರು ಹೊಳೆ. ಉತ್ತು ಬಿತ್ತು ಪೈರು ಬೆಳೆ. ಟಿವಿಯಲ್ಲಿ ಸದಾ ಕೂಗಾಡುವ ರಣಮಳೆ.

ಕರೆಯಂ ಕಟ್ಟಿಸು ಬಾಯಿಯಂ ಸವೆಸು

"ಕೆರೆಯಂ ಕಟ್ಟಿಸು, ಬಾವಿಯಂ ಸವೆಸು" ಎಂದು ಕನ್ನಡತಿ ತಾಯಿಯೊಬ್ಬಳು ಒಬ್ಬ ಮಗನಿಗೆ ಹಾಲೂಡಿಸುವಾಗ ಕಿವಿಯಲ್ಲಿ ಹೇಳಿದಳಂತೆ. ಅವನು ಮುಂದೆ ಅಮಾತ್ಯನಾಗಿ ಕೆರೆ-ಕಟ್ಟೆ-ಬಾವಿಗಳನ್ನು ತೋಡಿಸಿದನಂತೆ.  "ಕೆರೆಯಂ ಮುಚ್ಚಿಸು, ಕಟ್ಟಡಮಂ ಕಟ್ಟಿಸು" ಎಂದು ಅದು ಯಾರು ಯಾರ ಕಿವಿಯಲ್ಲಿ ಉಸುರಿದರೋ ಕಾಣೆ. ಬೆಂಗಳೂರಿನ ಅನೇಕ ಎ-ಕೆರೆಗಳು ಎಕರೆಗಳಾಗಿ ಬಿಕರಿಯಾಗಿದ್ದು ಈಗ ಹಳೆಯ ಕಥೆ. ತೊಂಬತ್ತರ ದಶಕದಲ್ಲಿ  ಬೆಂದಕಾಳೂರು ಸಿಲಿಕಾನ್ ವ್ಯಾಲಿಯಾಗಿ ಬದಲಾಗತೊಡಗಿದ್ದು ಅಕ್ಕಪಕ್ಕದ ಊರುಗಳ ಕೆರೆಗಳಿಂದ ಅಹೋರಾತ್ರಿ ಲಾರಿಗಳಲ್ಲಿ ಸಿಲಿಕಾನ್ ಅರ್ಥಾತ್ ಮರಳು ಬಂದು ಬೀಳತೊಡಗಿದಾಗ.  ಆ ಕೆರೆಯ ಮರಳನು ಈ ಕೆರೆಗೆ ಚೆಲ್ಲಿ ವರವ ಪಡೆದ ಭೂಪರು ಏಕಾಏಕಿ ಸಿರಿವಂತರಾದರು.  ತರೀಕೆರೆ ಏರಿ ಮೇಲೆ ಅದೆಷ್ಟು ಕುರಿಗಳು ಮೇಯುತ್ತಿದ್ದವೋ ಗೊತ್ತಿಲ್ಲ. ಬೆಂಗಳೂರಿನ ಕೆರೆ ಏರಿ ಮೇಲಂತೂ ತೋಳಗಳು ಕುರಿಗಳ ಕೈಕುಲುಕಿ ದೇಶಾವರಿ ನಗೆ ಬೀರಿದ್ದನ್ನು ನೋಡಿದವರು ಇದ್ದಾರೆ.   "ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದರಂತೆ" ಎಂಬ ಗಾದೆಯನ್ನು "ಇರುಳು ಕಂಡ ಕೆರೆಯಲ್ಲಿ ಹಗಲು ಇದ್ದರಂತೆ" ಎಂದು ಬದಲಾಯಿಸಬೇಕಾಯಿತು.  ಒಂದು ಘಟನೆ ಹೀಗೂ ನಡೆಯಿತೆಂದು ಹೇಳುತ್ತಾರೆ.   ಅದೆಷ್ಟು ನಿಜವೋ ಕಾಣೆ. ಕೆರೆ-ಎಸ್ಟೇಟಿನ ಮೇಲೆ ಕಟ್ಟಿದ ಬಹುಮಹಡಿ ಕಟ್ಟಡವೊಂದರಲ್ಲಿ ಮೊದಲನೇ ಮಹಡಿಯಲ್ಲಿ ಮನೆ ಖರೀದಿಸಿದವರೊಬ್ಬರು ಗೃಹಪ್ರವೇಶದ ನಂತರದ ದಿನ ಮನೆ ಬಾಗಿಲು...

ಚಾಟ್ ಜಿಪಿಟಿ

 ಗಜಲ್ 🌹 ಇನ್ನೆಷ್ಟು ಜಗಳಗಳನ್ನು ತಂದಿಡುವುದೋ ಚಾಟ್ ಜಿಪಿಟಿ ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ ಎಷ್ಟು ತ್ರಿಶಂಕುಗಳಿಗೆ ನೀನು ಕೊಡಿಸುವೆ ಮುಕ್ತಿ ಅದನ್ನೂ ನೀನೇ ಹೇಳಿಬಿಡು ಚಾಟ್ ಜಿಪಿಟಿ ಹುಟ್ಟುವ ಮಕ್ಕಳ ಮಿದುಳಲ್ಲಿ ಚಾಟ್ ಜಿಪಿಟಿ - ಚಿಪ್ಪು ಜೋಡಿಸಬಹುದೇ ಹೇಳು ಚಾಟ್ ಜಿಪಿಟಿ ಮಾತಾಡಿಕೊಳ್ಳುತ್ತಾರೆ ಸ್ಕ್ರೋಲ್ ಮಾಡುತ್ತ ಪಿಟಿಪಿಟಿ ನಿನ್ನದೇ ಜಪ ಮಾಡುತ್ತಾರೆ ಚಾಟ್ ಜಿಪಿಟಿ ಎಲ್ಲರೂ ಜಾಣರಾಗಿ ಸಿದ್ಧವಾಗಿದೆ ಸ್ಮಾರ್ಟ್ ಸಿಟಿ ಹೇಳು ಇನ್ನೇನು ಬೇಕು ಜೀವಕ್ಕೆ, ಚಾಟ್ ಜಿಪಿಟಿ ಗಜಲ್ 🌹🌹  ಎಲ್ಲ ಕೆಲಸಗಳನ್ನೂ ಮಾಡಲಿದೆ ಏಐ  ಕೈಗೆ ಕೆಲಸವಿಲ್ಲದೆ ಮಿಲಾಯಿಸೋಣ ಕೈಕೈ ಎಲ್ಲರಿಗೂ ಎಲ್ಲ ನೀಡಲಿದೆ ಏಐ ತಾಳು ಮನವೇ ಸುಮ್ಮನೇ ತಲ್ಲಣಿಸದಿರೈ ಎಲ್ಲರಿಗೂ ವಿದ್ಯೆ ನೀಡಲಿದೆ ಏಐ  ಹೇಳಿರಿ ಎಲ್ಲರೂ ವಿದ್ಯಾ ಏಐಪತಿಕೀ ಜೈ ಎಲ್ಲರಿಗೂ ಬುದ್ಧಿ ನೀಡಲಿದೆ ಏಐ  ಎಲ್ಲರಿಗೂ ಸದ್ಬುದ್ಧಿಯೇ ಎಂದು ಹೇಳಲಾಗದೈ  ಎಲ್ಲರಿಗೂ ಜ್ಞಾನ ನೀಡಲಿದೆ ಏಐ  ಗುರುಪೂರ್ಣಿಮೆಯ ದಕ್ಷಿಣೆ ಏಐಗೆ ನೀಡಿರೈ

ಬ್ಯಾಗ್ ಭಾಗ್ಯ

  ಬ್ಯಾಗ್ ಭಾಗ್ಯ ಎಲ್ಲರ ಮನೆಯಲ್ಲೂ ಇರುತ್ತದೆ ಒಂದಲ್ಲ ಹತ್ತು ಬ್ಯಾಗುಗಳ ಸಂಗ್ರಹ ಬಿಚ್ಚಿ ನೋಡಿದರೆ ಬೇರೇನೂ ಇರದು ಇನ್ನಷ್ಟು ಬ್ಯಾಗುಗಳ ವಿನಃ ಕೆಲವು ಪ್ಲಾಸ್ಟಿಕ್ ಕೆಲವು ದಪ್ಪ ಕಾಗದ ಮೇಲೆ ಆಕರ್ಷಕ ಚಿತ್ರ, ಬರಹ. ಎಸೆಯಲು ಮನಸ್ಸಾಗದೆ ಎಲ್ಲವೂ ಸೇರುತ್ತವೆ ಬ್ಯಾಗುಗಳ ಸಂಗ್ರಹ. ಮಾಡಲು ಹೊರಟಾಗ ಶಾಪಿಂಗ್ ಬ್ಯಾಗ್ ಮರೆಯುತ್ತದೆ ಅಯ್ಯೋ ಹಣೆಬರಹ. ಮರಳಿ ಬಂದಾಗ ಇನ್ನಷ್ಟು ಬೆಳೆಯುತ್ತದೆ. ಬ್ಯಾಗು ಗ ಳ ಸಂ ಗ್ರಹ . C.P. Ravikumar