ನೂರು ವರ್ಷಗಳ ತರುವಾಯ

 


ನೂರು ವರ್ಷಗಳ ತರುವಾಯ ನನ್ನ ಕವಿತೆ
ಓದುತ್ತ ನಿಂತಿರುವೆ, ಯಾರು ನೀನು?
ನಿನಗಾಗಿ ಈ ವಸಂತಸಂಪದದಿಂದ 
ಕಳಿಸಲಾರೆ ಒಂದಾದರೂ ಹೂವನ್ನು.
ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ
ಕಳಿಸಲಾರೆ ಒಂದಾದರೂ ಹೊನ್ನರೇಖೆ.
ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ
ಕಾಣುವುದು ಮುಗುಳುಗಳ ಹೊತ್ತ ಶಾಖೆ
ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ
ಮಾಯವಾದ ಕುಸುಮಗಳ ಗಂಧ:
ಪ್ರಫುಲ್ಲ ಮನದ ಉದ್ಯಾನದಲ್ಲಿ ಕೇಳಲಿ
ನೂರು ವರ್ಷಗಳ ಹಿಂದೆ ಜೀವನಾನಂದದಿಂದ 
ಹೀಗೇ ವಸಂತದ ಒಂದು ಸುಂದರ ದಿವಸ
ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ.

ಮೂಲ: ರವೀಂದ್ರನಾಥ ಟ್ಯಾಗೋರ್ 
ಕನ್ನಡಕ್ಕೆ: ಸಿ ಪಿ ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ