ಕಂಗಳಲಿ ಒಂದು ಕಥನ
ಕಂಗಳಲಿ ಒಂದು ಕಥನ
ಒಂದಿಷ್ಟು ಮೋಡ ಒಂದಿಷ್ಟು ನೀರು
ಮತ್ತೊಂದು ಕಥನ
ಒಂದಿಷ್ಟು ಮೋಡ ಒಂದಿಷ್ಟು ನೀರು
ಮತ್ತೊಂದು ಕಥನ
ನಯನದ್ವಯ ಜಲಧಾರೆಯ ಹರಿಸುತ್ತಿರುವುವು
ಕಿವಿಗೊಡುವಿರೋ ಯಾ ಇಲ್ಲವೋ ಹೇಳುತ್ತಿರುವುವು
ವಹಿಸಿದರೂ ಗಹನ ಮೌನ
ನಿಂತಾಗ ಕಂಬನಿಧಾರೆಯು, ಮಾತೂ ಮುಗಿವುದು
ಮಾತನ್ನು ಕೇಳಿಸಿಕೊಂಡರೆ ಏನೋ ಸಿಗುವುದು
ಹಳೆಯದು ಹಾಗೂ ನವೀನ
ಇರುಳೊಂದು ಜಾರಿದಕೂಡಲೆ ಇರುಳೇ ಕವಿದಿದೆ
ಮರೆತಿರುವ ಯಾವುದೋ ಮಾತು ನಾಲಿಗೆಯ ಮೇಲಿದೆ
ನೂರೆಂಟು ನುಡಿವ ನಯನ
ಮೂಲ : ಗುಲ್ಜಾರ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಚಿತ್ರ: ಮಾಸೂಮ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ