ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧ ಮೂಲ: ಮಹಾತ್ಮಾ ಗಾಂಧಿ ಕನ್ನಡ ಅನುವಾದ: ಡಾ. ಸಿ. ಪಿ. ರವಿಕುಮಾರ್ ಇಂದು ಗಾಂಧೀಜಿಯವರ ಪುಣ್ಯತಿಥಿ. ಯಾಂತ್ರೀಕೃತ ಮಗ್ಗಗಳು ಕೈಮಗ್ಗಗಳನ್ನು ನಿರ್ನಾಮಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಪ್ರತಿಭಟಿಸಿ ರಂಗ ನಾಟಕ ಕರ್ಮಿ ಮತ್ತು ಗಾಂಧೀವಾದಿ ಪ್ರಸನ್ನ ಇಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಗುಡಿ ಕೈಗಾರಿಕೆಗಳನ್ನು ಕುರಿತು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ನೋಡುವುದು ಸೂಕ್ತ. ಗ್ರಾ ಮೀಣ ಕೈಗಾರಿಕೆಗಳ ಅಳಿವಿನಿಂದ ಭಾರತದ ಏಳು ಲಕ್ಷ ಗ್ರಾಮಗಳ ನಾಶವಾಗುತ್ತದೆ. ನಾನು ಕೊಟ್ಟ ಸಲಹೆಗಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ನಿಸರ್ಗದ ಯಾವ ಶಕ್ತಿಗಳ ಮೇಲೆ ಮನುಷ್ಯ ವಿಜಯ ಸಾಧಿಸಿದ್ದಾನೋ ಆ ಶಕ್ತಿಗಳ ಬಳಕೆಗೆ ನಾನು ಶರಣಾಗಬೇಕೆಂದು ಕೆಲವರು ನನಗೆ ಸಲಹೆ ಕೊಟ್ಟಿದ್ದಾರೆ. ನೀರು, ಗಾಳಿ, ತೈಲ ಮತ್ತು ವಿದ್ಯುತ್ - ಇವುಗಳನ್ನು ಪಾಶ್ಚಾತ್ಯರು ಬಳಸಿಕೊಂಡಷ್ಟೇ ಸಂಪೂರ್ಣವಾಗಿ ನಾವೂ ಉಪಯೋಗಿಸಬೇಕು ಎಂದು ನನ್ನ ಟೀಕಾಕಾರ ಅಭಿಪ್ರಾಯ. ನಿಸರ್ಗದ ನಿಗೂಢ ಶಕ್ತಿಗಳ ಮೇಲೆ ಸಾಧಿಸಿದ ಹತೋಟಿಯ ಕಾರಣ ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ಮೂವತ್ತಮೂರು ಜನ ದಾಸರು ದೊರೆತಿದ್ದಾರಂತೆ. ಇದೇ ಮಾದರಿಯನ್ನು ಭಾರತದಲ್ಲಿ ಅಳವಡಿಸಿದರೆ ಪ್ರತಿಯ...