ಗಣೇಶನ ಸ್ಟೋರಿ
ಗಣೇಶನ ಸ್ಟೋರಿ ಸಿ.ಪಿ. ರವಿಕುಮಾರ್ (ಈ ಪದ್ಯ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ೨೦೧೩ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟವಾಗಿದೆ.) ಎಲ್ಲಾ ಆಬ್ಸ್ಟೆಕಲ್ಸ್ ರಿಮೂವ್ ಮಾಡಪ್ಪಾ ಅಂತ ಕೋರಿ ಹೇಳ್ತೀನಿ ಕೇಳಿ ಇಂದಿನ ಮಕ್ಕಳಿಗೆ ಗಣೇಶನ ಸ್ಟೋರಿ ।। ಸ್ವೀಟೀ, ಹೇಳ್ತೀನಿ ಕೇಳು ಗಣೇಶನ ಕತೇನ ಸೆಲಿಬ್ರೇಟ್ ಮಾಡೋದಕ್ಕೆ ಅವನ ಬರ್ತ್ ಡೇನ ಅವನ ಮಮ್ಮಿ ಡಬಲ್ ಲೇಯರ್ ಚಾಕ್ಲೇಟ್ ಕೇಕ್ ಮಾಡಿದ್ಲು ಯಾಕೇಂದ್ರೆ ಗಣೇಶಂಗೆ ಎರಡು ಸ್ವೀಟ್ ಟೂತ್ ಇತ್ತು ದೊಡ್ಡದು ಅರ್ಧ ಕೊಟ್ರೆ ಸಾಲ್ದು ನನಗೆ ಅಷ್ಟೂ ಬೇಕು ಅಂತ ಭಾರ ಆಯ್ತು ಹೊಟ್ಟೆ ತಿಂತಾ ತಿಂತಾ ಅಯ್ಯೋ ಇನ್ನೂ ಏನೇನೋ ಇದೆ ತಿನ್ನೋದಕ್ಕೆ ಮಜಾ ಮಜಾ ತಿಂಡಿ! ನೀನು ಕೇಕ್ ನಲ್ಲೇ ಹೊಟ್ಟೆ ತುಂಬ್ಕೊಂಡಿ! ವಾಕಿಂಗ್ ಹೋಗ್ ಬಾ ಒಂದು ರೌಂಡು, ಫ್ರೆಂಡ್ಸ್ ಬರೋದಕ್ಕೆ ಮುಂಚೆ ತಿಂದಿದ್ದು ಕರಗಿ ಸ್ವಲ್ಪ ಹಸಿವೆ ಆಗುತ್ತೆ ಗಣೇಶನ ಹತ್ರ ಒಂದು ಮಿಕ್ಕಿ ಮೌಸ್ ಇತ್ತು ಅದರ ಮೇಲೆ ಕೂತ್ಕೊಂಡು ಹೊರಟ ಟುಕುಟುಕು ಅಲ್ಲೊಂದು ಸ್ನೇಕ್ ಇತ್ತಂತೆ ಭುಸ್ ಅಂತ ಹೆಡೆ ಬಿಚ್ಕೊಂಡು ಮಿಕ್ಕಿ ಪುಕ್ಕಲ ! ಓಡಿದ ನೋಡು ಗಣೇಶನ್ನೂ ಹೊತ್ಕೊಂಡು! ಪಾಪ ಮುಗ್ಗರಿಸಿ ಬಿದ್ದ ಒಂದು ಕಡೆ ಅರ್ಧ ಮುರೀತು ಗಣೇಶನ ಒಂದು ಸ್ವೀಟ್ ದವಡೆ ಪಾಪ ಢಮ್ ಅಂತ ಒಡೆದು ಗಣೇಶನ ಸ್ಟಮಕ್ಕು ಚೆಲ್ಲಾಪಿಲ್ಲಿ ಆಗೋಯ್ತು ...