ಸಾವಿರಾರು ಕನಸುಗಳು
ಸಿ. ಪಿ. ರವಿಕುಮಾರ್ ಮಿರ್ಜಾ ಗಾಲಿಬ್ ಅವರ ಪ್ರಸಿದ್ಧ ಗಜಲ್ ಒಂದರ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಮಿರ್ಜಾ ಗಾಲಿಬ್ ಉರ್ದು ಶಾಯರಿಯ ಪ್ರಪಂಚದಲ್ಲಿ ಒಂದು ಮೇರುಶಿಖರವಿದ್ದಂತೆ. ಅವರ ಪರಿಶುದ್ಧ ಉರ್ದು ಮತ್ತು ಅಪೂರ್ವವೆನ್ನಿಸುವ ನುಡಿಗಟ್ಟುಗಳನ್ನು ಅನುವಾದಿಸುವುದು ಸುಲಭವಲ್ಲ! ಮೊದಲೇ ಹೇಳಿದಂತೆ ಇದೊಂದು ಪ್ರಯತ್ನ. "ಹಜಾರೋ ಖ್ವಾಹಿಷೇ ಐಸೀ" ಈ ಗಜಲ್ ಗಾಲಿಬ್ ಅವರ ಅತ್ಯಂತ ಜನಪ್ರಿಯ ರಚನೆಗಳಲ್ಲಿ ಒಂದು. ಇಲ್ಲಿ ಪದ್ಯಗಳ (ಶೇರ್) ನಡುವೆ ಎಲ್ಲೋ ಒಂದು ಕಥೆಯ ಎಳೆ ಇದೆ ಇಂದೂ ನಿಮಗೆ ಅನ್ನಿಸಬಹುದು. ಅನುರಕ್ತನಾದವನೊಬ್ಬನ ಕಥೆ. ಈ ಅನುರಕ್ತಿ ಒಬ್ಬ ಪ್ರೇಮಿಕೆಯಲ್ಲಿರಬಹುದು ಅಥವಾ ಮನಸ್ಸನ್ನು ಸೂರೆಗೊಳ್ಳುವ (ಶಾಯರಿಯಂಥ) ಇನ್ನಾವುದೇ ಕೆಲಸವೂ ಆಗಿರಬಹುದು. ಮುಂದೆ ಓದುವ ಮುನ್ನ ಕವಿತೆಯ ಅನುವಾದವನ್ನು ಒಮ್ಮೆ ಓದಿ. "ನಾನು ಕಂಡದ್ದು ಸಾವಿರಾರು ಕನಸುಗಳು, ಒಂದೊಂದನ್ನು ಪೂರೈಸಲೂ ಜೀವ ತೇಯಬೇಕು" ಎಂದು ಕವಿ ಹೇಳಿದಾಗ ಅವನು ತನ್ನ ಕಾವ್ಯ ರಚನೆಯ ಬಗ್ಗೆಯೇ ಹೇಳುತ್ತಿರಬಹುದು. "ಬಹಳಷ್ಟು ಇನ್ನೂ ಅಪೂರ್ಣ" ಎನ್ನುವಾಗ ತಾನು ಬರೆಯಬೇಕಾದದ್ದು ಇನ್ನೂ ತುಂಬಾ ಇದೆ ಎನ್ನುವ ಅರ್ಥವೂ ಹೊಮ್ಮಬಹುದು. "ಕೈಗೆ ನೆತ್ತರು ..." ಎನ್ನುವ ಸಾಲುಗಳಲ್ಲಿ ಗಾಲಿಬ್ ತನ್ನ ವಿಮರ್ಶಕರನ್ನು ಕುರಿತು ಹೇಳುತ್ತಿರಬಹುದೇ ಎಂಬ ಅನುಮಾನವೂ ನನಗೆ ಬರುತ್ತಿದೆ. "ಮದಿರೆಯ ಕ...