ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ?


ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ?

ಸಿ. ಪಿ. ರವಿಕುಮಾರ್ 


"ಮುಝೆ ಖಬರ್ ಥಿ ವೋ ಮೇರಾ ನಹೀ ಪರಾಯಾ ಥಾ" ಎಂಬ ಗಜಲ್ ಇವತ್ತು ಕೇಳಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. ಕೇಳಿದವರು ಯಾರನ್ನಾದರೂ ಹಿಡಿದಿಡುವ ಶಕ್ತಿ ಅವರ ಗಾಯನದಲ್ಲಿದೆ. ಈ ಗಜಲ್ ಬರೆದವರು ಫರತ್ ಷಹಜಾದ್ ಎಂಬ ಉರ್ದೂ ಕವಿ. ಸಂಗೀತ ನೀಡಿದವರು ಮಯೂರೇಶ್ ಪೈ.  ನಿಜವೆಂದರೆ ಕವಿ ಮತ್ತು ಸಂಗೀತಗಾರರು ಇಬ್ಬರೂ ನನ್ನ ಮಟ್ಟಿಗೆ ಹೊಸಬರು.  ಕವಿಯ ಇನ್ನಷ್ಟು ಕವಿತೆಗಳನ್ನು ಓದುವ ಮನಸ್ಸಾಗುತ್ತಿದೆ. ಈ ಹಾಡು  ಮೂರು ಅತ್ಯಂತ ಪ್ರತಿಭಾವಂತರು ಒಂದುಗೂಡಿ ಸೃಷ್ಟಿಸಿದ ಕಲಾಕೃತಿ.   ಈ ಹಾಡನ್ನು ನೀವು ಇಲ್ಲಿ ಕೇಳಬಹುದು.  
  
 ಈ ಗಜಲ್ ನಲ್ಲಿ ಅತೀವ ದುಃಖ ಮಡುಗಟ್ಟಿದೆ. ಇಬ್ಬರು ಗಾಢ ಸ್ನೇಹಿತರು ಅಗಲಿದ್ದಾರೆ. ಕಾರಣ ಏನೆಂದು ಗೊತ್ತಿಲ್ಲ.  ಯಾವುದೋ ಮನಸ್ತಾಪವೋ ಅಥವಾ ವಿಧಿಯ ಕ್ರೌರ್ಯವೋ  ಅವರನ್ನು ದೂರ ಮಾಡಿದೆ. ಬೇರಾದರೂ ಇನ್ನೊಬ್ಬನ(ಳ)ನ್ನು ನೆನೆದು ಒಬ್ಬಳು(ನು) ದುಃಖಿಸುತ್ತಿದ್ದಾಳೆ(ನೆ).  ಗಜಲ್ ನ ಕನ್ನಡ ಅನುವಾದವನ್ನು ಕೆಳಗೆ ಕೊಟ್ಟಿದೆ. 


ಅವನು ನನ್ನವನಲ್ಲ ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ? 
ಆದರೇನು ದೇವರೆಂದು ಹೃದಯದ ಬಡಿತವು ನಂಬಿತ್ತು ಅವನನ್ನೇ

ಯಾರನ್ನು ಕನಸುಗಳಲ್ಲಿ ಹುಡುಕುತ್ತಿದ್ದೆನೋ ಯುಗಗಳಿಂದಲೂ 
ಅದು ನನ್ನ ಕಣ್ಣಂಚಿನಲ್ಲೇ ತುಳುಕಿದ ಒಂದು ಕಣ್ಣೀರ ಬಿಂದು 

ನಿನ್ನ ತಪ್ಪಲ್ಲ ಬಿಡು ನನ್ನ ಒಂಟಿತನದ ಯಾತನೆ 
ಈ ರೋಗವನ್ನು ಎದೆಗೆ ಅಂಟಿಸಿಕೊಂಡವನು ನಾನೇ 

ಇಡೀ ನಗರದಲ್ಲಿ ಅವನೊಬ್ಬನೇ ನನಗೆ ಅಪರಿಚಿತನೆಂದರೆ 
ನನ್ನ ಹಾಡನ್ನು ನಗರಕ್ಕೆ ಹಾಡಿ ಹೇಳಿದ್ದನಲ್ಲ ಒಮ್ಮೆ  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)