ಧೃತರಾಷ್ಟ್ರ


ಧೃತರಾಷ್ಟ್ರ 

ಸಿ. ಪಿ. ರವಿಕುಮಾರ್



"ಧೃತರಾಷ್ಟ್ರ" ಎಂಬ ಹೆಸರೇ ಯಾಕೆ ಅಂತ ಯೋಚಿಸುತ್ತಿದ್ದೆ.  ರಾಷ್ಟ್ರ ಎಂದರೇನು ಅಂತ ನಮಗೆಲ್ಲ ಗೊತ್ತು. ಧೃತ ಎಂಬುದರ ಅರ್ಥವನ್ನು ಆನ್ಲೈನ್ ಸಂಸ್ಕೃತ ಪದಕೋಶದಲ್ಲಿ ಹುಡುಕಿದರೆ 24 ಅರ್ಥಗಳು ದೊರೆತವು (ಕೆಳಗಿರುವ ಪಟ್ಟಿ ನೋಡಿ - ಇಂಗ್ಲಿಷ್ ಅರ್ಥದ ಪಕ್ಕದಲ್ಲಿ ಕೊಟ್ಟಿರುವ ಕನ್ನಡ ಅನುವಾದ ನನ್ನದು.) ಈ ಪಟ್ಟಿಯನ್ನು ನಿಧಾನವಾಗಿ ಓದಿ.  ಮಹಾಭಾರತದ ಕವಿ ಬಹಳ ಯೋಚನೆ ಮಾಡಿ   ಧೃತರಾಷ್ಟ್ರನ ಪಾತ್ರಕ್ಕೆ ಹೆಸರನ್ನು ಇಟ್ಟಿದ್ದಾನೆ ಅಂತ ನಿಮಗೂ ಅನ್ನಿಸಬಹುದು.  ಭಾರತವು ಧೃತರಾಷ್ಟ್ರನ ಕಥೆ ಎಂದೂ ಅನ್ನಿಸಬಹುದು.  ಭಾರತವು ಒಂದು ಧೃತ-ರಾಷ್ಟ್ರದ ಕಥೆ ಎಂದೂ ಅನ್ನಿಸಬಹುದು. 

धृतdhRtaadj.borne
धृतdhRtaadj.measured (ಅಳೆದದ್ದು)
धृतdhRtaadj.turned towards or fixed upon (ಕೇಂದ್ರಿತವಾದದ್ದು)
धृतdhRtaadj.observed (ಗಮನಿಸಿದ್ದು)
धृतdhRtaadj.detained (ತಡೆಹಿಡಿದದ್ದು)
धृतdhRtaadj.practised (ಪ್ರಯೋಗದಲ್ಲಿ ತಂದಿದ್ದು)
धृतdhRtaadj.being (ಸ್ಥಿತಿ)
धृतdhRtaadj.kept back (ಮುಚ್ಚಿಟ್ಟದ್ದು)
धृतdhRtaadj.resolved on (ಯಾವುದರ ಮೇಲೆ ನಿರ್ಧಾರ ಕೈಗೊಳ್ಳಲಾಯಿತೋ ಅದು)
धृतdhRtaadj.held (ಬಂಧಿಸಿದ್ದು, ಹಿಡಿದಿಟ್ಟದ್ದು)
धृतdhRtaadj.deposited as surety (ಗಿರವಿ ಇಟ್ಟದ್ದು)
धृतdhRtaadj.possessed (ಸುಪರ್ದಿನಲ್ಲಿ ಇದ್ದದ್ದು ಅಥವಾ (ದೆವ್ವ ಇತ್ಯಾದಿ) "ಹಿಡಿದುಕೊಂಡಿರುವಂಥದು")
धृतdhRtaadj.ready or prepared for (ಸಿದ್ಧವಾಗಿರುವುದು)
धृतdhRtaadj.maintained (ಸಂಭಾಳಿಸಿ ಇಟ್ಟುಕೊಂಡದ್ದು)
धृतdhRtaadj.continuing (ಮುಂದುವರೆದದ್ದು)
धृतdhRtaadj.pledged (ಪಣ ತೊಟ್ಟದ್ದು)
धृतdhRtaadj.weighed (ತೂಗಿದ್ದು)
धृतdhRtaadj.existing (ಈಗ ಇರುವಂಥದ್ದು)
धृतdhRtaadj.quoted (ಉದ್ಧೃತವಾದದ್ದು)
धृतdhRtaadj.worn   [ cloths, disguise, etc ] (ಚಿಂದಿಯಾದದ್ದು)
धृतdhRtaadj.cited by (ಬೇರೆಯವರಿಂದ ಉದ್ಧೃತವಾದದ್ದು)
धृतdhRtaadj.used (ಬಳಸಿದ್ದು)
धृतdhRtaadj.drawn tight (ಗಟ್ಟಿಯಾಗಿ ಎಳೆದು ಕಟ್ಟಿದ್ದು)
धृतdhRtaadj.prolonged (ತಡವಾಗಿದ್ದು)
धृतdhRtan.particular manner of fighting (ಒಂದು ಬಗೆಯ ಯುದ್ಧಕಲೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)