ಪೋಸ್ಟ್‌ಗಳು

ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಳೆದುಹೋಗಿದೆ

ಸಿ. ಪಿ. ರವಿಕುಮಾರ್  "ಸಮ್ಮೇಳನದ ಗದ್ದಲದಲ್ಲಿ ಕಳೆದುಹೋಗಿದೆ, ದಯವಿಟ್ಟು ಅನೌನ್ಸ್ ಮಾಡಿ" ಎಂದು ಒಬ್ಬರು ಅವಲತ್ತುಕೊಂಡರು. ಸಮ್ಮೇಳನದ ಆಯೋಜಕರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವುದರಲ್ಲಿ "ಬಿಸಿ"ಯಾಗಿದ್ದರು. ಮಂತ್ರಿಗಳು ಆರು ಗಂಟೆ ತಡವಾಗಿ ಬಂದು ಕಾರ್ಯಕ್ರಮಗಲೆಲ್ಲಾ ಆಕ್ರಮಗಳಾಗಿಹೋಗಿದ್ದವು. ಮಂತ್ರಿಗಳ ಭಾಷಣದ ನಡುವೆ ಒಂದು ಗುಂಪು ಘೋಷಣೆ ಕೂಗಿದ್ದು ಆಭಾಸಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲೇ ಮಂತ್ರಿಗಳು ತಮ್ಮ ಹೆಸರು ಆರನೇ ಸಾಲಿನಲ್ಲಿ ಬಂದಿದೆ ಅಂತ "ಗರಂ" ಆಗಿದ್ದರು. ಅವರಿಗಾಗಿ ಆಮಂತ್ರಣ ಪತ್ರಿಕೆ, ಬ್ಯಾನರ್ ಎಲ್ಲವನ್ನೂ ಮರುಮುದ್ರಣ ಮಾಡಿ ಬಜೆಟ್ ಗೋತಾ ಹೊಡೆದಿತ್ತು. ಇಷ್ಟೆಲ್ಲಾ ಗೊಂದಲದ ನಡುವೆ ಸುಸ್ತಾದರೂ  ಮರುದಿನ ಪತ್ರಿಕೆಗಳಿಗಾಗಿ ಊಟದ ವ್ಯವಸ್ಥೆಗಳ ಫೋಟೋ ತೆಗೆಸುತ್ತಿದ್ದರು. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ವ್ಯವಸ್ಥೆ ಇದ್ದುದನ್ನು ನೋಡಿ ಜನ ಮೆಚ್ಚುಗೆಯಿಂದ ತಲೆದೂಗುತ್ತಿದ್ದರು. "ಸರ್ ದಯವಿಟ್ಟು ಅನೌನ್ಸ್ ಮಾಡಿ!" ಎಂದು ಬಂದವರು ಮತ್ತೊಮ್ಮೆ ಕೈಮುಗಿದು ಕೇಳಿಕೊಂಡರು. ಆಯೋಜಕರು ಸಿಡಿಮಿಡಿಗೊಂಡರು. ಆದರೂ ಪತ್ರಕರ್ತರು ಅಲ್ಲೇ ಓಡಾಡುತ್ತಾ ಇದ್ದುದರಿಂದ ಸಂಭಾಳಿಸಿಕೊಂಡು "ಆಗಲಿ, ಅನೌನ್ಸ್ ಮಾಡೋಣ. ಏನು ಕಳೆದುಹೋದವರ ಹೆಸರು?" ಎಂದರು. "ಕಳೆದುಹೋದವರು ಅಲ್ಲ, ಕಳೆದುಹೋದದ್ದು." "ಅಯ್ಯೋ ಕಳೆದುಹೋದದ್ದು ...

ಅಗ್ನಿಪಥ

ಇಮೇಜ್
ಮೂಲ ಹಿಂದಿ ಕವಿತೆ: ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಇಂದೊಂದು ಪ್ರೇರಣಾತ್ಮಕ ಕವಿತೆ. ಮುಂದೆ ಸಾಗುವುದೊಂದೇ ಗುರಿಯಾದಾಗ ಎಲ್ಲೂ ನಿಲ್ಲುವ ಪ್ರಶ್ನೆಯಿಲ್ಲ, ವಿಶ್ರಮಿಸಿಕೊಳ್ಳುವ ಪ್ರಶ್ನೆಯಿಲ್ಲ, ಬಂದ ದಾರಿಯ ಕಡೆಗೆ ತಿರುಗಿ ನೋಡುವ ಪ್ರಶ್ನೆಯಿಲ್ಲ.   ನಡೆಯಬೇಕಾದದ್ದು ಕೆಂಡದ ಹಾದಿಯೇ ಇರಲಿ!  ಕಷ್ಟದೊಂದಿಗೆ ಮನುಷ್ಯನ ಹೋರಾಟ ಕವಿಗೆ ಒಂದು ಮಹಾನ್ ದೃಶ್ಯದಂತೆ ಕಾಣುತ್ತದೆ.  ಹಸಿರು ಉಟ್ಟ ಎತ್ತರ ವೃಕ್ಷವಿರಲಿ ಹತ್ತಿರ, ನೆರಳು ಒಂದು ಎಲೆಯದೂ ಬೇಡುವುದು ಅಸಮ್ಮತ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ! ದಣಿಯಲಾರೆ ನೀನೆಂದೂ ನಿಲ್ಲಲಾರೆ ನೀನೆಂದೂ ತಿರುಗಲಾರೆ ಹಿಂದಕ್ಕೆ ತೊಡು ಶಪಥ, ತೊಡು ಶಪಥ, ತೊಡು ಶಪಥ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ! ಎಂಥ  ಮಹಾನ್ ದೃಶ್ಯ ಸಾಗುವುದು ಮನುಷ್ಯ ಬೆವರು ಕಣ್ಣೀರು ರಕ್ತದಿಂದ ಓತಪ್ರೋತ ಓತಪ್ರೋತ ಓತಪ್ರೋತ, ಅಗ್ನಿಪಥ! ಅಗ್ನಿಪಥ! ಅಗ್ನಿಪಥ!  (೧೮ ನವೆಂಬರ್ ೨೦೧೬)

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಇಮೇಜ್
ಸಿ. ಪಿ. ರವಿಕುಮಾರ್  ಕರ್ನಾಟಕ ನಾಡಗೀತೆಯನ್ನು ಹಾಡುವವರಿಗೆ/ಕೇಳುವವರಿಗೆ  ಅದರ ಅರ್ಥ ತಿಳಿಯದೇ ಇದ್ದರೆ ಈ ಬ್ಲಾಗ್ ಬರಹವನ್ನು ಅವರು ಓದಬಹುದು. ಆದಷ್ಟೂ ಸರಳವಾಗಿ ಕವಿತೆಯ ಸಾರವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ.   ಈ ವಿಶಿಷ್ಟ ಕವಿತೆಯಲ್ಲಿ  ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ.  ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ! ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲ...

ಗ್ರಂಥಾಲಯದಲ್ಲಿ ಕವನವಾಚನ

ಇಮೇಜ್
ಸಿ. ಪಿ. ರವಿಕುಮಾರ್ (17 ನವೆಂಬರ್, 2016) ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್.  ಅವರು ನನ್ನ ಹಿತೈಷಿಗಳು.   ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ  ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ! ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ.  ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು. ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ...

ಒಂದು ನಾಣ್ಯ, ಎರಡು ಮುಖ

ಸಿ. ಪಿ. ರವಿಕುಮಾರ್  ನಾಣ್ಯದ ಒಂದು ಮುಖ ಸಾಚಾ, ಇನ್ನೊಂದು ಮುಖ ಖೋಟಾ. ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ, ಹೇಗೋ ನಡೆಯಬಹುದು ಆಟ. ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು -  ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ. ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ, ಉರಿದುಬೀಳುತ್ತಾರೆ ಮಾತೆತ್ತಿದರೆ. ಯೋಚಿಸಿದರೆ ತೋರುವುದು ನಿಮಗೆ, ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ? ಸಾಚಾ ಮುಖ ಕಾಣಿಸಿತೆ ನಿನಗೆ, ಅವನಿಗೆ ಖೋಟಾಮುಖವಾಗುತ್ತಿದೆ ಭಾಸ. ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ, ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ?

ಚರಿತ್ರೆಯ ಇತಿಹಾಸ

ಸಿ. ಪಿ. ರವಿಕುಮಾರ್   ಯಾರಾದರೂ ನನ್ನನ್ನು ಮಾಡಿದರೆ ಶಿಕ್ಷಣ ಸಚಿವ  ತಕ್ಷಣ ಮಾಡುವೆನು ಒಂದು ಅತಿಮುಖ್ಯ ಕೆಲಸ! ಸಿಲಬಸ್ ಪುಸ್ತಕದಿಂದ ಹೊಡೆಸಿಹಾಕಿಬಿಡುವೆ  ಹಿಸ್ಟರಿ, ಚರಿತ್ರೆ, ಇತಿಹಾಸ.  ಆಗುವುದೇ ಇಲ್ಲ ಆಗ ಇತಿಹಾಸದ ಪುನರಾವರ್ತನೆ ಮಾಯವೇ ಆಗಿಬಿಡುವುದು ದ್ವೇಷ. ಮಾಗದಂತೆ ಎಂದೂ ನೂರಾರು ವರ್ಷದ ಗಾಯ ಕಿತ್ತುತ್ತಲೇ ಇರುವ ಇತಿಹಾಸದ ಪಾಠಗಳು! ಎಂದೋ ಉರಿದ ಅಗ್ನಿಗೆ ಇನ್ನಷ್ಟು ಉರುವಲನ್ನಿಟ್ಟು ಕೆದಕುವ ಈ ಆಟಗಳು! ಹಳೆಯ ತಪ್ಪುಗಳನ್ನು ಮತ್ತೆ ಮಾಡದೇ ಇರುವುದು ಇತಿಹಾಸದಿಂದ ಕಲಿಯಬೇಕಾದ ಪಾಠ. ನಮಗಿಲ್ಲ ಅದಕ್ಕೆ ಬೇಕಾದ ತಾಳ್ಮೆ ಮತ್ತು ತಯಾರಿ ಆದ್ದರಿಂದ ಹೇಳೋಣ ಇತಿಹಾಸಕ್ಕೆ ಟಾಟಾ. (2015)

ರೂಮಿಯ ಮೂರು ರಚನೆಗಳು

ಇಮೇಜ್
ಮೂಲ: ಮೌಲಾನಾ ಜಲಾಲುದ್ದೀನ್ ರೂಮಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ (1) ಕಲ್ಲಾಗಿ ಸತ್ತವನು ಹುಲ್ಲಾಗಿ ಮೇಲೆದ್ದೆ  ಹುಲ್ಲಾಗಿ ಸತ್ತವನು ಎದ್ದೆ ಹುಲ್ಲೆಯಾಗಿ ಹುಲ್ಲೆಯಾಗಿ ಸತ್ತವನು ಪಡೆದಿರುವೆ ಮಾನವ ಜನ್ಮ  ಏತರ ಭಯ?  ಸಾವಿನಿಂದ  ನನಗೇನಾಗಿದೆ   ನಷ್ಟ? (2) ಒಡೆಯನನ್ನು ಕಾಣದೆ ಸವೆಸಿದ ಜೀವನವು  ಮೈಮರೆತ ನಿದ್ರೆ ಅಥವಾ ಭಿನ್ನ ರೂಪದಲ್ಲಿ ಸಾವು  ನಿನ್ನನ್ನು ಕಲುಷಿತಗೊಳಿಸುವ ನೀರು ವಿಷವಾಗಿದೆ  ನಿನ್ನನ್ನು ಶುದ್ಧಗೊಳಿಸುವ ವಿಷವಾಗಿದೆ ನೀರು  (3) ಉದ್ಧಾರವಾಯಿತು ನಿನ್ನ  ಅನುರಾಗಾಮೃತ ಹೀರಿದ ಆತ್ಮ  ಉದಾತ್ತ ಸ್ಥಿತಿಗೇರಿಸಿದೆ ಆ ಜೀವಸಲಿಲ ಬಳಿಬಂದ ಸಾವು ಯಾವಾಗ ಮೂಸಿತೋ ನಿನ್ನ ಸೌರಭ  ನನ್ನಿಂದ ಏನೂ ಅಪೇಕ್ಷೆ ಪಡುವುದಿಲ್ಲ 

ಕಣ್ಣಿಗೆ ಹರಿದರ್ಶನದ ದಾಹ (ಸೂರದಾಸರ ರಚನೆ)

ಇಮೇಜ್
"ಅಂಖಿಯಾ ಹರಿದರ್ಶನ್ ಕೀ ಪ್ಯಾಸೀ" ... ಸೂರದಾಸರ ಈ ಗೀತೆಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ದಿವ್ಯಕಂಠದಲ್ಲಿ ನೀವು ಕೇಳಬಹುದು.  ಈ ರಚನೆಯಲ್ಲಿ ಸೂರದಾಸರು ತಮ್ಮ ಇಷ್ಟದೈವ ಕೃಷ್ಣನನ್ನು ಕಾಣಲಾರದೇ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಂಡಿದ್ದಾರೆ.  ಸೂರದಾಸರು ಹುಟ್ಟಾ ಕುರುಡರಾಗಿದ್ದವರು. ಅವರಿಗೆ ಕೃಷ್ಣನ ದರ್ಶನ ಹೇಗೆ  ಉಂಟಾಯಿತು ಎಂಬುದಕ್ಕೆ ಒಂದು ಕಥೆ ಜನಜನಿತವಾಗಿದೆ.   ಒಮ್ಮೆ ಸೂರದಾಸರು ದಾರಿಯಲ್ಲಿದ್ದ ಬಾವಿಯನ್ನು ಕಾಣದೇ ಅದರೊಳಕ್ಕೆ ಬಿದ್ದರಂತೆ. ಆಗ ಸಾಕ್ಷಾತ್ ಶ್ರೀ ಕೃಷ್ಣನೇ ಬಂದು ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದನಂತೆ.  ಕೃಷ್ಣನ ಸಂಗಡ ಇದ್ದ ರಾಧೆ "ಇವನಿಗಾಗಿ ನೀನೇ ಸ್ವತಃ ಬರುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸುತ್ತಾಳೆ.  "ಅವನು ನನ್ನ ಪರಮ ಭಕ್ತ" ಎಂದು ಕೃಷ್ಣ ಉತ್ತರಿಸುತ್ತಾನೆ. ಹಾಗೇ "ಅವನ ಬಳಿಗೆ ಹೋಗಬೇಡ," ಎಂದು ಎಚ್ಚರಿಸುತ್ತಾನೆ. ಆದರೆ ರಾಧೆ ಕುತೂಹಲದಿಂದ ಸೂರದಾಸನ ಬಳಿಗೆ ಹೋಗುತ್ತಾಳೆ.  ಆಕೆ ಯಾರೆಂದು ಊಹಿಸಿದ ಸೂರದಾಸರು ಆಕೆಯ ಕಾಲಿನ ಗೆಜ್ಜೆಯನ್ನು ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ.  ರಾಧೆ ಎಷ್ಟು ಬೇಡಿಕೊಂಡರೂ ಕೊಡುವುದಿಲ್ಲ. "ನಾನು ಯಾರು ಗೊತ್ತೇ? ನಾನು ಕೃಷ್ಣನ ಪ್ರಿಯತಮೆ, ರಾಧೆ" ಎಂದು ಆಕೆ ಹೇಳಿದಾಗ ಸೂರದಾಸರು "ನಾನು ಹೇಗೆ ನಂಬಲಿ?  ಕುರುಡನೆಂದು ನೀನು  ಮೋಸ ಮಾಡುತ್ತಿರಬಹುದು!" ಎನ್ನುತ್ತಾರೆ.  ರಾಧೆ ...