ಅಗ್ನಿಪಥ
ಮೂಲ ಹಿಂದಿ ಕವಿತೆ: ಹರಿವಂಶರಾಯ್ ಬಚ್ಚನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಇಂದೊಂದು ಪ್ರೇರಣಾತ್ಮಕ ಕವಿತೆ. ಮುಂದೆ ಸಾಗುವುದೊಂದೇ ಗುರಿಯಾದಾಗ ಎಲ್ಲೂ ನಿಲ್ಲುವ ಪ್ರಶ್ನೆಯಿಲ್ಲ, ವಿಶ್ರಮಿಸಿಕೊಳ್ಳುವ ಪ್ರಶ್ನೆಯಿಲ್ಲ, ಬಂದ ದಾರಿಯ ಕಡೆಗೆ ತಿರುಗಿ ನೋಡುವ ಪ್ರಶ್ನೆಯಿಲ್ಲ. ನಡೆಯಬೇಕಾದದ್ದು ಕೆಂಡದ ಹಾದಿಯೇ ಇರಲಿ! ಕಷ್ಟದೊಂದಿಗೆ ಮನುಷ್ಯನ ಹೋರಾಟ ಕವಿಗೆ ಒಂದು ಮಹಾನ್ ದೃಶ್ಯದಂತೆ ಕಾಣುತ್ತದೆ.
ಹಸಿರು ಉಟ್ಟ ಎತ್ತರ
ವೃಕ್ಷವಿರಲಿ ಹತ್ತಿರ,
ನೆರಳು ಒಂದು ಎಲೆಯದೂ
ಬೇಡುವುದು ಅಸಮ್ಮತ,
ಅಗ್ನಿಪಥ! ಅಗ್ನಿಪಥ! ಅಗ್ನಿಪಥ!
ದಣಿಯಲಾರೆ ನೀನೆಂದೂ
ನಿಲ್ಲಲಾರೆ ನೀನೆಂದೂ
ತಿರುಗಲಾರೆ ಹಿಂದಕ್ಕೆ
ತೊಡು ಶಪಥ, ತೊಡು ಶಪಥ, ತೊಡು ಶಪಥ,
ಅಗ್ನಿಪಥ! ಅಗ್ನಿಪಥ! ಅಗ್ನಿಪಥ!
ಎಂಥ ಮಹಾನ್ ದೃಶ್ಯ
ಸಾಗುವುದು ಮನುಷ್ಯ
ಬೆವರು ಕಣ್ಣೀರು ರಕ್ತದಿಂದ
ಓತಪ್ರೋತ ಓತಪ್ರೋತ ಓತಪ್ರೋತ,
ಅಗ್ನಿಪಥ! ಅಗ್ನಿಪಥ! ಅಗ್ನಿಪಥ!
(೧೮ ನವೆಂಬರ್ ೨೦೧೬)
ಸಾಗುವುದು ಮನುಷ್ಯ
ಬೆವರು ಕಣ್ಣೀರು ರಕ್ತದಿಂದ
ಓತಪ್ರೋತ ಓತಪ್ರೋತ ಓತಪ್ರೋತ,
ಅಗ್ನಿಪಥ! ಅಗ್ನಿಪಥ! ಅಗ್ನಿಪಥ!
(೧೮ ನವೆಂಬರ್ ೨೦೧೬)
वृक्ष हों भले खड़े,
ಪ್ರತ್ಯುತ್ತರಅಳಿಸಿहों घने हों बड़े,
एक पत्र छाँह भी,
माँग मत, माँग मत, माँग मत,
अग्निपथ अग्निपथ अग्निपथ।
तू न थकेगा कभी,
तू न रुकेगा कभी,
तू न मुड़ेगा कभी,
कर शपथ, कर शपथ, कर शपथ,
अग्निपथ अग्निपथ अग्निपथ।
यह महान दृश्य है,
चल रहा मनुष्य है,
अश्रु श्वेत रक्त से,
लथपथ लथपथ लथपथ,
अग्निपथ अग्निपथ अग्निपथ।