ಒಂದು ನಾಣ್ಯ, ಎರಡು ಮುಖ

ಸಿ. ಪಿ. ರವಿಕುಮಾರ್ 
ನಾಣ್ಯದ ಒಂದು ಮುಖ ಸಾಚಾ,
ಇನ್ನೊಂದು ಮುಖ ಖೋಟಾ.
ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ,
ಹೇಗೋ ನಡೆಯಬಹುದು ಆಟ.
ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು - 
ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ.



ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ,
ಉರಿದುಬೀಳುತ್ತಾರೆ ಮಾತೆತ್ತಿದರೆ.

ಯೋಚಿಸಿದರೆ ತೋರುವುದು ನಿಮಗೆ,
ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ?
ಸಾಚಾ ಮುಖ ಕಾಣಿಸಿತೆ ನಿನಗೆ,
ಅವನಿಗೆ ಖೋಟಾಮುಖವಾಗುತ್ತಿದೆ ಭಾಸ.
ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ,
ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)