ರೂಮಿಯ ಮೂರು ರಚನೆಗಳು

ಮೂಲ: ಮೌಲಾನಾ ಜಲಾಲುದ್ದೀನ್ ರೂಮಿ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್

Image result for rumi

(1)

ಕಲ್ಲಾಗಿ ಸತ್ತವನು ಹುಲ್ಲಾಗಿ ಮೇಲೆದ್ದೆ 
ಹುಲ್ಲಾಗಿ ಸತ್ತವನು ಎದ್ದೆ ಹುಲ್ಲೆಯಾಗಿ
ಹುಲ್ಲೆಯಾಗಿ ಸತ್ತವನು ಪಡೆದಿರುವೆ ಮಾನವ ಜನ್ಮ 
ಏತರ ಭಯ?  ಸಾವಿನಿಂದ ನನಗೇನಾಗಿದೆ ನಷ್ಟ?


(2)

ಒಡೆಯನನ್ನು ಕಾಣದೆ ಸವೆಸಿದ ಜೀವನವು 
ಮೈಮರೆತ ನಿದ್ರೆ ಅಥವಾ ಭಿನ್ನ ರೂಪದಲ್ಲಿ ಸಾವು 
ನಿನ್ನನ್ನು ಕಲುಷಿತಗೊಳಿಸುವ ನೀರು ವಿಷವಾಗಿದೆ 
ನಿನ್ನನ್ನು ಶುದ್ಧಗೊಳಿಸುವ ವಿಷವಾಗಿದೆ ನೀರು 

(3)

ಉದ್ಧಾರವಾಯಿತು ನಿನ್ನ ಅನುರಾಗಾಮೃತ ಹೀರಿದ ಆತ್ಮ 
ಉದಾತ್ತ ಸ್ಥಿತಿಗೇರಿಸಿದೆ ಆ ಜೀವಸಲಿಲ
ಬಳಿಬಂದ ಸಾವು ಯಾವಾಗ ಮೂಸಿತೋ ನಿನ್ನ ಸೌರಭ 
ನನ್ನಿಂದ ಏನೂ ಅಪೇಕ್ಷೆ ಪಡುವುದಿಲ್ಲ 

ಕಾಮೆಂಟ್‌ಗಳು

  1. (1)
    A stone I died and rose again a plant;
    A plant I died and rose an animal;
    I died an animal and was born a man.
    Why should I fear? What have I lost by death?

    (2)
    Any lifetime that is spent without seeing the master
    Is either death in disguise or a deep sleep.
    The water that pollutes you is poison;
    The poison that purifies you is water.

    (3)
    Any soul that drank the nectar of your passion was lifted.
    From that water of life he is in a state of elation.
    Death came, smelled me, and sensed your fragrance instead.
    From then on, death lost all hope of me.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)