ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನೆಯೊಳಗೆ ಮನೆಯೊಡೆಯ

ಇಮೇಜ್
ಸಿ. ಪಿ. ರವಿಕುಮಾರ್  ಅಪ್ಪನ ಮನೆಯನ್ನು ಹಾಗೆ  ಹೀಗೆ ಎಂದೆಲ್ಲಾ ಬೈದು ಅವನಿದ್ದಾಗಲೇ ಆಸ್ತಿ ಭಾಗ ಮಾಡಿ ಒಡೆದು ಕಟ್ಟಿದ ಮನೆಯಲ್ಲಿ ಮಜವಾಗಿ ಇರುತ್ತಾ ಕಳೆದವು ಮೂವತ್ತು ವರ್ಷ.   ಮಕ್ಕಳಿಗೂ ಬೋಧಿಸಿದ ಅಪ್ಪನ ಬಗ್ಗೆ ತಾನೇ ಕಟ್ಟಿದ ಸುಳ್ಳುಕಥೆ ಮತ್ತು ತನ್ನನ್ನು ಹೀರೋ ಎಂದು ಬಿಂಬಿಸುವ ಆದರ್ಶ.  ಈಗ ಅವನ ಮಕ್ಕಳು ಅವನ ಮನೆಯಲ್ಲಿ ಹುಡುಕಿದಾಗ ಬಿರುಕು   ಅವನಿಗೆ ಆಗುತ್ತದೆ ವಿದ್ಯುತ್ ಸ್ಪರ್ಶ.  ಸಿಟ್ಟಾಗುತ್ತಾನೆ ಕೆಂಗಣ್ಣು ಬಿಡುತ್ತಾನೆ ಕೈಗೆ ಚಪ್ಪಲಿ ಎತ್ತಿಕೊಳ್ಳುತ್ತಾನೆ ತಾಳುತ್ತಾನೆ ಕಾಲಪುರುಷನ ರೌದ್ರವೇಷ. 

ಮೂಗು ಮುರಿಯದಿರಿ ಮುಖದ ಮೇಲಿರುವುದೇಕೆಂದು

ಇಮೇಜ್
ಮೂಲ ಕವಿತೆ: ಜ್ಯಾಕ್ ಪ್ರೆಲುಟ್ಸ್ಕಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಮೂ ಗು ಮುರಿಯದಿರಿ ಮುಖದ ಮೇಲಿರುವುದೇಕೆಂದು , ಎಲ್ಲಿದೆಯೋ ಅಲ್ಲೇ ಚೆನ್ನಾಗಿದೆ ಮೂಗು! ಬೇರೆಲ್ಲಾದರೂ ಮೆತ್ತಿದ್ದರೆ ಮೂಗಣ್ಣನ ಅಣ್ಣ   ಫಜೀತಿಯಾಗುತ್ತಿತ್ತು ನಿನ್ನ ಮೂಗನ್ನ! ಕಾಲ್ಬೆರಳುಗಳ ನಡುವೆ ಇದ್ದಿದ್ದರೆ ಮೂಗು ಹೇಗಿರುತ್ತಿತ್ತೆಂದು ಆಲೋಚಿಸಿ ನೋಡು! ಪಾಪ! ಇಡೀ ದಿವಸವೂ ಆಘ್ರಾಣಿಸುತ್ತಾ ಇರಬೇಕಾಗುತ್ತಿತ್ತು ನಿನ್ನ ಪಾದಗಳ ದುರ್ನಾತ . ತಲೆಯ ಮೇಲೆ ಕೂಡಿಸಿದ್ದರೆ ಆ ಬ್ರಹ್ಮ ಅನರ್ಥವೇ ಆಗುತ್ತಿತ್ತು ಕಾಣಣ್ಣಾ! ಗಾಳಿ ಬೀಸಿದಾಗೆಲ್ಲಾ ಹಾರಾಡುವ ಕೂದಲು ಮುತ್ತಿಟ್ಟು ಮೂಗಿಗೆ ದಿನವೆಲ್ಲ ಸೀನು! ಕಿವಿಯೊಳಗೇ ಇಟ್ಟುಬಿಟ್ಟಿದ್ದರೆ ಹೇಗೆ ? ಹೆದರುತ್ತೇನೆ ಹೀಗೆ ಆಲೋಚಿಸಿದರೇನೇ! ಆಕ್ಷಿ! ಆಕ್ಷಿ! ಎಂದು ಸೀನಿದಾಗೆಲ್ಲಾ ಮಿದುಳಲ್ಲಿ ನಾನ್ನೂರು ವೋಲ್ಟ್ ಸಂಚಾರ!   ಅಂಟಿಸಿದ್ದಾನೆ ಹುಬ್ಬು-ಗಲ್ಲಗಳ ನಡುಮಧ್ಯೆ ಪರಬೊಮ್ಮ ಸರಿಯಾದ ಜಾಗದಲ್ಲೇ ಬೇರೆಲ್ಲಾದರೂ ಮೆತ್ತಿದ್ದರೆ ಮೂಗಣ್ಣನ ಅಣ್ಣ   ಫಜೀತಿಯಾಗುತ್ತಿತ್ತು ನಿನ್ನ ಮೂಗನ್ನ! (c) 2017, ಸಿ. ಪಿ. ರವಿಕುಮಾರ್ 

ಕನಸಿನೊಳಗಿನ್ನೊಂದು ಕನಸು

ಇಮೇಜ್
­­­ ಕನಸಿನೊಳಗಿನ್ನೊಂದು  ಕನಸು  ಮೂಲ  ಇಂಗ್ಲಿಷ್ ಕವಿತೆ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಎಡ್ಗರ್ ಆಲೆನ್ ಪೋ (ಹತ್ತೊಂಬತ್ತನೇ ಶತಮಾನ) ಅಮೆರಿಕನ್ ಸಾಹಿತ್ಯಕಾರರಲ್ಲಿ ಅಗ್ರಮಾನ್ಯ ಹೆಸರು. ಜೀವನದಲ್ಲಿ ತುಂಬಾ ಯಾತನೆ ಅನುಭವಿಸಿದ ವ್ಯಕ್ತಿ. ನಲವತ್ತನೆಯ ವಯಸ್ಸಿಗೇ ತೀರಿಕೊಂಡ.  ಈತನ “ದ ರೇವೆನ್” ಕವಿತೆಯನ್ನು ಪ್ರಥಮ ಹಾರರ್ ಸಾಹಿತ್ಯ ಎಂದೂ ಕೆಲವರು ಪರಿಗಣಿಸುತ್ತಾರೆ.  ತನ್ನ 28ನೇ ವಯಸ್ಸಿನಲ್ಲಿ ತನ್ನ ಹದಿಮೂರು ವರ್ಷದ ಸಂಬಂಧಿಯೊಂದಿಗೆ ಮದುವೆಯಾದ. ಈಕೆಯ ಸಾವು ಅವನನ್ನು ದುಃಖಕ್ಕೆ ದೂಡಿತು. ಈ ಕವಿತೆಯನ್ನು ಅವನು ಬರೆದದ್ದು ಅದೇ ಸಂದರ್ಭದಲ್ಲಿರಬಹುದು.    ಇ ಗೋ ಬಂದಾಗಿದೆ ಬೀಳ್ಕೊಡುವ ಹೊತ್ತು ನಿನ್ನ ಹಣೆ ಮೇಲೊಂದು ಹೂಮುತ್ತನಿತ್ತು ಯೋಚಿಸುತ್ತೇನೆ ನೀನು ನನ್ನನ್ನು ಕುರಿತು ಆಗಲೇ ಹೇಳಿದೆಯಲ್ಲ ಒಂದು ಮಾತು: ಕನಸೆಂದೆಯಲ್ಲ ನನ್ನ ಇಡೀ ಬದುಕು ನಿಜವೆನ್ನಿಸುತ್ತಿದೆ ಆ ಮಾತು ನನಗೂ ಬಾಡಿಹೋದರೇನಾಯ್ತು ಒಂದೇ ದಿನದಲ್ಲಿ ನಿಜವಲ್ಲವೇ ಬಾಡಿದ್ದು ಭರವಸೆಯ ಬಳ್ಳಿ? ನಾವು ನೋಡಿದ್ದು, ನಾವು ಅನುಭವಿಸುವ ಎಲ್ಲವೂ ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು!  ನಿಂ ತಿದ್ದೇನೆ ಕಡಲತೀರದಲ್ಲಿ ಒಬ್ಬನೇ ಭೋರ್ಗರೆಯುತ್ತಾ ಬಂದು ಅಪ್ಪಳಿಸುವ ಹೆದ್ದೆರೆ ನನ್ನ ಕೈಯಲ್ಲಿರುವ ಹಿಡಿ ಹೊನ್ನು ಮರಳು ಹಿಡಿಯಲಾಗದೆ ಯಾಕೋ ಸೋಲುತ್ತಿವೆ ಬೆರಳು...

ಓಂ ಪುರಿ ಅವರಿಗೊಂದು ಶ್ರದ್ಧಾಂಜಲಿ

ಇಮೇಜ್
ಓಂ ಪುರಿ ಅವರಿಗೊಂದು ಶ್ರದ್ಧಾಂಜಲಿ ಸಿ. ಪಿ. ರವಿಕುಮಾರ್ ನೂರಾರು ಪಾತ್ರಗಳನ್ನು ತೆರೆಯ ಮೇಲೆ ಪುನರ್ಸೃಷ್ಟಿಸಿದ ಅಸಾಮಾನ್ಯ ಪ್ರತಿಭೆಗೆ ಒಂದು ಶ್ರದ್ಧಾಂಜಲಿ  ನಟ ಓಂ ಪುರಿ ಅವರ ನಿಧನದ ಸುದ್ದಿ ಬಂದಿದೆ. ಎಷ್ಟೊಂದು ಪಾತ್ರಗಳನ್ನು ಅವರು ತೆರೆಯ ಮೇಲೆ ಪುನರ್ಸೃಷ್ಟಿಸಿದ್ದಾರೆ ಎಂದು ನೆನೆದಾಗ ಆಶ್ಚರ್ಯವಾಗುತ್ತದೆ. ತಮಸ್ ಕಾದಂಬರಿಯನ್ನು ಗೋವಿಂದ್ ನಿಹಲಾನಿ ಟೆಲಿವಿಷನ್  ಧಾರಾವಾಹಿಯ ರೂಪದಲ್ಲಿ ತಂದಾಗ ಅದರ ಬಹುಮುಖ್ಯ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದು ಓಂ ಪುರಿಯನ್ನು.  ಅವಿಭಜಿತ ಪಂಜಾಬಿನಲ್ಲಿ ಕಥೆ ನಡೆಯುತ್ತದೆ. ನತ್ಥೂ ಎಂಬ ಚಮ್ಮಾರನಿಗೆ ಯಾರೋ ಒಬ್ಬ ಕಿಡಿಗೇಡಿ ಒಂದು ಹಂದಿಯನ್ನುಕೊಟ್ಟು ಅದನ್ನು  ವಧೆ ಮಾಡಬೇಕೆಂದು  ತಾಕೀತು ಮಾಡುತ್ತಾನೆ. ತನಗೆ ಪ್ರಾಣಿಗಳನ್ನು ಕೊಲ್ಲುವ ವಿದ್ಯೆ ಗೊತ್ತಿಲ್ಲ , ತಾನೇನಿದ್ದರೂ ಚರ್ಮ ಸುಲಿಯುವವನು ಎಂದು ಹೇಳಿದರೂ “ಡಾಕ್ಟರ್ ಕೆಲಸಕ್ಕೆ ಬೇಕಾಗಿದೆ” ಎಂದು ಐದು ರೂಪಾಯಿ ಕೊಡುತ್ತಾನೆ.  ಆಗಿನ ಕಾಲದಲ್ಲಿ ಐದು ರೂಪಾಯಿ ಬಹುದೊಡ್ಡ ಮೊತ್ತ.  ಆಮಿಷಕ್ಕೆ ಬಿದ್ದ ನತ್ಥೂ ಹಂದಿಯನ್ನು ಕೊಲ್ಲಲು  ಶತಪ್ರಯತ್ನ ಪಡುತ್ತಾನೆ. ಈ ಸನ್ನಿವೇಶದಿಂದಲೇ ತಮಸ್ ಪ್ರಾರಂಭವಾಗುವುದು. ಇಲ್ಲಿ ಕೊಲ್ಲಲ್ಪಡುವ ಪಶುವನ್ನು ಭಾರತಕ್ಕೆ ಒಂದು ರೂಪಕ ಎಂದು ಕೂಡಾ ಇಟ್ಟುಕೊಳ್ಳಬಹುದು. ದುರದೃಷ್ಟವಶಾತ್ ಹಂದಿಯ ಹೆಣವನ್ನು ಮಸೀದಿಯ ಮುಂದೆ ಎಸೆದು ಕೋಮುಗಲಭೆ ಎಬ್ಬ...