ಕನಸಿನೊಳಗಿನ್ನೊಂದು ಕನಸು
ಕನಸಿನೊಳಗಿನ್ನೊಂದು ಕನಸು
ಮೂಲ ಇಂಗ್ಲಿಷ್ ಕವಿತೆ: ಎಡ್ಗರ್ ಆಲನ್ ಪೋ
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಎಡ್ಗರ್ ಆಲೆನ್ ಪೋ (ಹತ್ತೊಂಬತ್ತನೇ ಶತಮಾನ) ಅಮೆರಿಕನ್ ಸಾಹಿತ್ಯಕಾರರಲ್ಲಿ ಅಗ್ರಮಾನ್ಯ ಹೆಸರು. ಜೀವನದಲ್ಲಿ ತುಂಬಾ ಯಾತನೆ ಅನುಭವಿಸಿದ ವ್ಯಕ್ತಿ. ನಲವತ್ತನೆಯ ವಯಸ್ಸಿಗೇ ತೀರಿಕೊಂಡ. ಈತನ “ದ ರೇವೆನ್” ಕವಿತೆಯನ್ನು ಪ್ರಥಮ ಹಾರರ್ ಸಾಹಿತ್ಯ ಎಂದೂ ಕೆಲವರು ಪರಿಗಣಿಸುತ್ತಾರೆ. ತನ್ನ 28ನೇ ವಯಸ್ಸಿನಲ್ಲಿ ತನ್ನ ಹದಿಮೂರು ವರ್ಷದ ಸಂಬಂಧಿಯೊಂದಿಗೆ ಮದುವೆಯಾದ. ಈಕೆಯ ಸಾವು ಅವನನ್ನು ದುಃಖಕ್ಕೆ ದೂಡಿತು. ಈ ಕವಿತೆಯನ್ನು ಅವನು ಬರೆದದ್ದು ಅದೇ ಸಂದರ್ಭದಲ್ಲಿರಬಹುದು.
ಇಗೋ ಬಂದಾಗಿದೆ ಬೀಳ್ಕೊಡುವ ಹೊತ್ತು
ನಿನ್ನ ಹಣೆ ಮೇಲೊಂದು ಹೂಮುತ್ತನಿತ್ತು
ಯೋಚಿಸುತ್ತೇನೆ ನೀನು ನನ್ನನ್ನು ಕುರಿತು
ಆಗಲೇ ಹೇಳಿದೆಯಲ್ಲ ಒಂದು ಮಾತು:
ಕನಸೆಂದೆಯಲ್ಲ ನನ್ನ ಇಡೀ ಬದುಕು
ನಿಜವೆನ್ನಿಸುತ್ತಿದೆ ಆ ಮಾತು ನನಗೂ
ಬಾಡಿಹೋದರೇನಾಯ್ತು ಒಂದೇ ದಿನದಲ್ಲಿ
ನಿಜವಲ್ಲವೇ ಬಾಡಿದ್ದು ಭರವಸೆಯ ಬಳ್ಳಿ?
ನಾವು ನೋಡಿದ್ದು, ನಾವು ಅನುಭವಿಸುವ ಎಲ್ಲವೂ
ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು!
ನಿನ್ನ ಹಣೆ ಮೇಲೊಂದು ಹೂಮುತ್ತನಿತ್ತು
ಯೋಚಿಸುತ್ತೇನೆ ನೀನು ನನ್ನನ್ನು ಕುರಿತು
ಆಗಲೇ ಹೇಳಿದೆಯಲ್ಲ ಒಂದು ಮಾತು:
ಕನಸೆಂದೆಯಲ್ಲ ನನ್ನ ಇಡೀ ಬದುಕು
ನಿಜವೆನ್ನಿಸುತ್ತಿದೆ ಆ ಮಾತು ನನಗೂ
ಬಾಡಿಹೋದರೇನಾಯ್ತು ಒಂದೇ ದಿನದಲ್ಲಿ
ನಿಜವಲ್ಲವೇ ಬಾಡಿದ್ದು ಭರವಸೆಯ ಬಳ್ಳಿ?
ನಾವು ನೋಡಿದ್ದು, ನಾವು ಅನುಭವಿಸುವ ಎಲ್ಲವೂ
ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು!
ನಿಂತಿದ್ದೇನೆ ಕಡಲತೀರದಲ್ಲಿ ಒಬ್ಬನೇ
ಭೋರ್ಗರೆಯುತ್ತಾ ಬಂದು ಅಪ್ಪಳಿಸುವ ಹೆದ್ದೆರೆ
ನನ್ನ ಕೈಯಲ್ಲಿರುವ ಹಿಡಿ ಹೊನ್ನು ಮರಳು
ಹಿಡಿಯಲಾಗದೆ ಯಾಕೋ ಸೋಲುತ್ತಿವೆ ಬೆರಳು
ಜಾರಿಹೋಗುತ್ತಿವೆ ಅಯ್ಯೋ ಎಷ್ಟೇ ಬಿಗಿ ಹಿಡಿದರೂ
ತಾಳಲಾರದೇ ಬಿಕ್ಕಳಿಸಿ ಅಳುವಾಗ ನಾನು
ದೇವರೇ! ಹೇಗೋ ಭದ್ರವಾಗಿ ಕೈಮುಚ್ಚಿಕೊಂಡು
ಉಳಿಸಿಕೊಳ್ಳಲಾರೆನೇ ಒಂದಾದರೂ ಹರಳು
ಕಸಿದೊಯ್ಯುವ ಮುನ್ನ ನಿಷ್ಕರುಣ ಅಲೆಗಳು!
ನಾವು ನೋಡುವುದೆಲ್ಲಾ ಅನುಭವಿಸುವುದೆಲ್ಲವೂ
ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು?
ಭೋರ್ಗರೆಯುತ್ತಾ ಬಂದು ಅಪ್ಪಳಿಸುವ ಹೆದ್ದೆರೆ
ನನ್ನ ಕೈಯಲ್ಲಿರುವ ಹಿಡಿ ಹೊನ್ನು ಮರಳು
ಹಿಡಿಯಲಾಗದೆ ಯಾಕೋ ಸೋಲುತ್ತಿವೆ ಬೆರಳು
ಜಾರಿಹೋಗುತ್ತಿವೆ ಅಯ್ಯೋ ಎಷ್ಟೇ ಬಿಗಿ ಹಿಡಿದರೂ
ತಾಳಲಾರದೇ ಬಿಕ್ಕಳಿಸಿ ಅಳುವಾಗ ನಾನು
ದೇವರೇ! ಹೇಗೋ ಭದ್ರವಾಗಿ ಕೈಮುಚ್ಚಿಕೊಂಡು
ಉಳಿಸಿಕೊಳ್ಳಲಾರೆನೇ ಒಂದಾದರೂ ಹರಳು
ಕಸಿದೊಯ್ಯುವ ಮುನ್ನ ನಿಷ್ಕರುಣ ಅಲೆಗಳು!
ನಾವು ನೋಡುವುದೆಲ್ಲಾ ಅನುಭವಿಸುವುದೆಲ್ಲವೂ
ಮಾತ್ರವೇ ಒಂದು ಕನಸಿನೊಳಗಿನ್ನೊಂದು ಕನಸು?
(c) 2017, ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ