ಮನೆಯೊಳಗೆ ಮನೆಯೊಡೆಯ
ಸಿ. ಪಿ. ರವಿಕುಮಾರ್
ಅಪ್ಪನ
ಮನೆಯನ್ನು
ಹಾಗೆ ಹೀಗೆ ಎಂದೆಲ್ಲಾ ಬೈದು
ಅವನಿದ್ದಾಗಲೇ
ಆಸ್ತಿ ಭಾಗ ಮಾಡಿ
ಒಡೆದು
ಕಟ್ಟಿದ ಮನೆಯಲ್ಲಿ
ಮಜವಾಗಿ
ಇರುತ್ತಾ ಕಳೆದವು
ಮೂವತ್ತು
ವರ್ಷ.
ಮಕ್ಕಳಿಗೂ
ಬೋಧಿಸಿದ
ಅಪ್ಪನ
ಬಗ್ಗೆ
ತಾನೇ
ಕಟ್ಟಿದ ಸುಳ್ಳುಕಥೆ
ಮತ್ತು
ತನ್ನನ್ನು ಹೀರೋ ಎಂದು
ಬಿಂಬಿಸುವ
ಆದರ್ಶ.
ಈಗ
ಅವನ ಮಕ್ಕಳು
ಅವನ
ಮನೆಯಲ್ಲಿ
ಹುಡುಕಿದಾಗ
ಬಿರುಕು
ಅವನಿಗೆ
ಆಗುತ್ತದೆ ವಿದ್ಯುತ್ ಸ್ಪರ್ಶ.
ಸಿಟ್ಟಾಗುತ್ತಾನೆ
ಕೆಂಗಣ್ಣು
ಬಿಡುತ್ತಾನೆ
ಕೈಗೆ
ಚಪ್ಪಲಿ ಎತ್ತಿಕೊಳ್ಳುತ್ತಾನೆ
ತಾಳುತ್ತಾನೆ
ಕಾಲಪುರುಷನ ರೌದ್ರವೇಷ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ