ಕತ್ತಲೆ ಬೆಳಕು - ಶ್ರೀರಂಗರ ನಾಟಕ
ಸಿ ಪಿ ರವಿಕುಮಾರ್
ಶ್ರೀರಂಗರ ನಾಟಕಗಳನ್ನು ಈನಡುವೆ ಅಷ್ಟಾಗಿ ಯಾರೂ ಪ್ರಯೋಗಿಸುವುದಿಲ್ಲ. ರಂಗಶಂಕರದಲ್ಲಿ ಇವತ್ತು ಅವರ ಕತ್ತಲೆಬೆಳಕು ನಾಟಕದ ಪ್ರಯೋಗವಿತ್ತು. ಒಂದು ಕಾಲದಲ್ಲಿ ಶ್ರೀರಂಗ ಕನ್ನಡದ ಅಗ್ರಮಾನ್ಯ ನಾಟಕಕಾರರಾಗಿದ್ದರು. ಕೈಲಾಸಂ ನಂತರ ಪ್ರಖ್ಯಾತರಾದ ನಾಟಕಕಾರರೆಂದರೆ ಶ್ರೀರಂಗ (ಆದ್ಯರಂಗಾಚಾರ್ಯ). ಕತ್ತಲೆ-ಬೆಳಕು ನಾಟಕದಲ್ಲಿ ಒಬ್ಬ ನಾಟಕಕಾರನದ್ದು ಕೇಂದ್ರಪಾತ್ರ. ಇವನಿಗೆ ನಾಟಕ ಬರೆದುಕೊಡುವಂತೆ ಕಂಪನಿಯ ಮಾಲೀಕ ಹಿಂದೆಬಿದ್ದಿದ್ದಾನೆ. ಆದರೆ ನಾಟಕಕಾರನಿಗೆ ಯಾವ ವಸ್ತುವೂ ರುಚಿಸದಾಗಿದೆ. ಮಾಲೀಕನೇ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂದು ಸೂಚನೆಗಳನ್ನು ಕೊಡುತ್ತಿದ್ದಾನೆ. ಮಾಲೀಕನಿಗೆ ಬೇಕಾಗಿರುವುದು ರಸವತ್ತಾದ ನಾಟಕ - ವಯಸ್ಸಾದ ಗಂಡನ ಮಗನನ್ನೇ ಪ್ರೇಮಿಸುವ ಮಲತಾಯಿ ತನ್ನ ಗಂಡನನ್ನೇ ಕೊಲೆ ಮಾಡುವ ಕತೆಯನ್ನು ಅವನು ಸೂಚಿಸುತ್ತಾನೆ.
ನಾಟಕಕಾರನ ಮನೆಯ ಸಮೀಪದಲ್ಲೇ ಹಲವು ಕತೆಗಳು ನಡೆಯುತ್ತಿವೆ. ಸದಾ ತಾನಾಯಿತು, ತನ್ನ ಬರವಣಿಗೆಯಾಯಿತು ಎಂದು ಕತ್ತಲಿನಲ್ಲಿ ಕುಳಿತಿರುವ ನಾಟಕಕಾರನಿಗೆ ಹೊರಗಿನ ಜಗತ್ತು ಪ್ರಕಾಶವಾಗಿಲ್ಲ. Fact is stranger than fiction ಎನ್ನುತ್ತಾರೆ. ಶ್ರೀಮಂತನೊಬ್ಬನ ಯುವಪತ್ನಿ ತನ್ನ ಡ್ರೈವರ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ. ತನ್ನ ಮುದಿಗಂಡನನ್ನು ಮುಗಿಸಿಬಿಡುವಂತೆ ಕೂಡಾ ಅವಳು ಡ್ರೈವರ್ ಗೆ ಸೂಚಿಸುತ್ತಾಳೆ! ಬಡತನದಲ್ಲಿ ಬೆಂದ ಒಂದು ಗಂಡ-ಹೆಂಡಿರ ಜೋಡಿ ಆತ್ಮಹತ್ಯೆಯ ವಿಚಾರ ಮಾತಾಡಿಕೊಳ್ಳುತ್ತಿದ್ದಾರೆ.
ಪೋಲೀಸನೊಬ್ಬ ತನಗೆ ಬಂದ ಮಾಹಿತಿಯನ್ನು ಅನುಸರಿಸಿ ತನಿಖೆ ನಡೆಸುತ್ತಿದ್ದಾನೆ. ನಾಟಕಕಾರನ ಮೇಲೆ ಕೂಡಾ ಅವನಿಗೆ ಗುಮಾನಿ ಇದೆ!! ಪೋಲೀಸನಿಗೆ ಪತ್ರ ಬರೆದು ಸುಳ್ಳು ಸುಳಿವುಗಳನ್ನು ಕೊಡುವ ಒಬ್ಬನ ಪಾತ್ರವೂ ಬರುತ್ತದೆ. ಪೋಲೀಸನ ಪ್ರವೇಶವಾದಾಗ ಪಾತ್ರಗಳು ಹೆದರಿ ಕತ್ತಲಿರುವ ನಾಟಕಕಾರನ ಮನೆಯೊಳಗೇ ಹೋಗಿ ಸೇರಿಕೊಳ್ಳುವುದು ಸಾಂಕೇತಿಕವಾಗಿದೆ.
ನಾಟಕದ ಪ್ರಯೋಗದಲ್ಲಿ ಧಾರವಾಡದ ಆಡುಭಾಷೆಯ ಪ್ರಯೋಗವನ್ನು ಇನ್ನಷ್ಟು ಸುಧಾರಿಸಬೇಕು ಎನ್ನಿಸಿತು. ಇನ್ನಷ್ಟು ತಾಲೀಮಿನ ಅಗತ್ಯವೂ ಇದೆ. ಆದರೆ ಒಟ್ಟಾರೆ ನೋಡಿದಾಗ ನಾಟಕಕ್ಕೆ ಒಳ್ಳೆಯ ಅಂಕಗಳನ್ನು ಕೊಡಬಹುದು. ಶ್ರೀರಂಗರ ಒಂದು ಹಳೆಯ ನಾಟಕವನ್ನು ಮತ್ತೆ ರಂಗಕ್ಕೆ ತಂದಿರುವುದೇ ಒಂದು ಸಾಹಸ (ನಿರ್ದೇಶನ: ವಿನಯ್ ಶಾಸ್ತ್ರಿ, ತಂಡ: ವಾಸ್ಪ್).

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ