ಪೋಸ್ಟ್‌ಗಳು

ಮೇ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ನೇಹಿತರು (ಮಕ್ಕಳ ಕವಿತೆ)

ಇಮೇಜ್
ಮೂಲ ಕವಿತೆ - ಆಬಿ ಫಾರ್ವೆಲ್ ಬ್ರೌನ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಎಷ್ಟು ಚೆನ್ನ ಒಂದಷ್ಟು ಹೊತ್ತು ಈ ಮರದ ಕೆಳಗೆ ಅಂಗತ್ತ ಮಲಗಿ ಮೇಲ್ಗಡೆಯ ಹಸಿರು ಚಪ್ಪರವ ಕಣ್ಣುಮುಚ್ಚಿ ನೋಡುತ್ತ ಹಸಿರು ಚಪ್ಪರದ ಮೇಲೆ ಕಾಣುವುದು ಸ್ವಚ್ಛ ನೀಲ ಆಕಾಶ ನನ್ನ ಕಡೆಗೆ ನೋಡುತ್ತ ಬೀರುತಿದೆ ನಭನೀಲ ಮಂದಹಾಸ ಚಪ್ಪರದ ನಡುವೆ ತೂರುತ್ತ ಬಂದ ಹೊಂಗಿರಣ  ನವಿಲುಗರಿಯಂತೆ ಮುಖವನ್ನು  ಸವರಿ ಮುತ್ತಿಟ್ಟು ತೋರುವುದು ತಾಯ ಪ್ರೇಮ-ಮಮತೆ! ತಂಬೆಲರು ಹಾಡುವ ಮಧುರಗಾನ ಸವಿದಂತೆ ಮಧುರ  ಜೇನು ಕಾಣದಿದ್ದರೂ ರೂಪ, ಕಾಣುವೆನು ಅದರ ಪ್ರೀತಿ, ಒಲವನ್ನು ಇಷ್ಟೆಲ್ಲ ಸ್ನೇಹಿತರು ತೋರುತಿರುವಾಗ ಮಮಕಾರ, ಕರುಣೆ, ಪ್ರೀತಿ ಯಾವ ಮಗುವನೂ ಕಾಡಲಾರದು ಯಾವ ಬಗೆಯ ಭೀತಿ  (c) ಸಿ. ಪಿ. ರವಿಕುಮಾರ್, ೨೦೧೯

ಮಂಜಿನ ಚೆಂಡು (ಮಕ್ಕಳ ಕವಿತೆ)

ಇಮೇಜ್
ಮೂಲ ಕವಿತೆ - ಶೆಲ್ ಸ್ಪ್ರಿಂಗ್ ಸ್ಟೀನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಾಡಿದೆ ನಾನು ಮಂಜಿನ ಚೆಂಡು ನೋಡಲು ಒಳ್ಳೆ ಬೆಳ್ಳಿಯ ಗುಂಡು ನಾನೇ ಸಾಕುವೆ ಮುದ್ದಿನ ಚೆಂಡು ಪಕ್ಕದಲ್ಲಿಯೇ ಮಲಗಿಸಿಕೊಂಡು ಚಳಿ! ಎನ್ನುತ ಹೊದ್ದಿಕೆಯಲಿ ಸುತ್ತಿ ಕೊಟ್ಟೆನು ದಿಂಬಿಗೆ ಮೆತ್ತನೆ ಹತ್ತಿ ಬೆಳಗಾಯಿತು ಲಗುಬಗೆಯಲಿ ಎದ್ದೆ ಎಲ್ಲಿರುವೆ ಓ ಮಂಜಿನ ಮುದ್ದೆ! ಓಡಿಹೋಗಿತ್ತು! ನಾನಿದ್ದೆಯೊಳಿದ್ದೆ! (ಹಾಸಿಗೆಯನು ಅದು  ಮಾಡಿದೆ   ಒದ್ದೆ)

ಬೆಟ್ಟದ ಗಾಳಿ (ಮಕ್ಕಳ ಕವಿತೆ)

ಇಮೇಜ್
ಮೂಲ - ಎ. ಎ. ಮಿಲ್ನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಬರುವುದೆಲ್ಲಿಂದ  ಬೀಸುವ ಗಾಳಿ, ಹೋಗುವುದೆಲ್ಲಿಗೆ ಎನ್ನುವ ವಿಷಯ - ಕೇಳಿದೆ ಎಷ್ಟೋ ಜನರನು ನಾನೂ ಅರಿಯರು ಯಾರೂ ರ-ಹ-ಸ್ಯ! ಬರುವುದು ಎಲ್ಲಿಂದಲೋ ವೇಗದಲಿ ಹೊರಡಲು ಅಷ್ಟೇ ಗಡಿಬಿಡಿ ತೋರಿ - ಹಿಂಬಾಲಿಸಿದರೂ ಓಡೋಡುತ್ತಾ ಕೈಯಿಗೆ ಸಿಗದೇ ಆಗಿ ಪರಾರಿ! ಪಟಪಟ ಹಾರುವ ಗಾಳೀಪಟದ ದಾರವ ಬಿಟ್ಟರೆ ಮೇಲ್ಗಡೆ ಹಾರಿ ಗಾಳಿಯ ಜೊತೆಗೆ ಹಗಲೂರಾತ್ರಿ ಮಾಡುವಾಗ ಜುಮ್ಮೆಂದು ಸವಾರಿ ಹಿಂಬಾಲಿಸುವೆನು ಪಟವನು ನಾನೂ ಬರುವುದು ನನಗೂ ಪತ್ತೇದಾರಿ! ಕಂಡುಹಿಡಿಯುವೆನು ಖಂಡಿತವಾಗಿ ಹೋಗುವುದೆಲ್ಲಿಗೆ ಗಾಳಿಯು, ಅಲೆಮಾರಿ! ಬಿಡಿಸಿದರೂ ಬೀಸುವ ಸುಳಿಗಾಳಿ ಎಲ್ಲಿಗೆ ಹೋಗುವುದೆಂಬ ರಹಸ್ಯ- ಗೂಢವಾಗಿಯೇ ಉಳಿದುಬಿಡುವುದೇ ಅದರ ಮೂಲ ಎಲ್ಲೆನ್ನುವ ವಿಷಯ! ( c) ಸಿ. ಪಿ ರವಿಕುಮಾರ್, ೨೦೧೯

ಏನಾಗುತ್ತೋ ಆಗತ್ತೆ

ಇಮೇಜ್
ಮೂಲ - ರೇ ಈವಾನ್ಸ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಆಲ್ಫ್ರೆಡ್ ಹಿಚ್ಕಾಕ್ ಅವರು ನಿರ್ದೇಶಿಸಿರುವ ಪ್ರಸಿದ್ಧ ಚಿತ್ರ "ದ ಮ್ಯಾನ್ ಹೂ ನ್ಯೂ ಟೂ ಮಚ್" ಚಿತ್ರದಲ್ಲಿ ನಟಿ ಡೋರಿಸ್ ಡೇ ಹಾಡಿದ "ಕೇ ಸೆರಾ, ಸೆರಾ! ವಾಟೆವರ್ ವಿಲ್ ಬೀ ವಿಲ್ ಬೀ!" ಎಂಬ ಹಾಡು ಇಂದಿಗೂ ಜನಪ್ರಿಯ. ಯೂಟ್ಯೂಬಿನಲ್ಲಿ ನಿಮಗೆ ಸಿಕ್ಕುತ್ತದೆ. ಮುಂದಾಗುವುದನ್ನು ನೋಡುವ ಕುತೂಹಲ ನಮಗೇಕೆ? ಏನಾಗುತ್ತೋ ಅದಾಗುತ್ತದೆ ಎಂಬ ಸಂದೇಶವಿರುವ ಈ ಹಾಡನ್ನು ಹಾಡಿದ ಡೋರಿಸ್ ಡೇ ಇಂದು ನಿಧನರಾಗಿದ್ದಾರೆಂಬ ಸುದ್ದಿ ಬಂದಿದೆ.  ತಮ್ಮ ಸೌಂದರ್ಯ ಮತ್ತು ನಟನೆಗೆ ಪ್ರಸಿದ್ಧರಾಗಿದ್ದ ಡೋರಿಸ್ ಡೇ ಅವರಿಗೆ ೯೩ ವರ್ಷ ವಯಸ್ಸಾಗಿತ್ತು.  ಚಿಕ್ಕವಳು ಆಗ ನಾನು  ಇನ್ನೂ,  ಅಮ್ಮನ್ನ ಕೇಳ್ದೆ, ಏನಾಗ್ತೀನಿ? ಚೆಲುವೆ ಆಗ್ತೀನಾ, ಸಿರಿವಂತ್ಳಾಗ್ತೀನಾ? ಅವಳ್ಹೇಳಿದ್ದೇನ್ ಗೊತ್ತೇ? ಯಧ್ಭವತಿ, ತದ್ಭವತಿ! ಏನಾಗತ್ತೋ ಆಗತ್ತೆ! ಭವಿಷ್ಯ ನಮ್ದೇನ್ ಕಾಣೋಕೆ? ಏನಾಗತ್ತೋ ಅದಾಗತ್ತೆ! ಮದುವೆ ಗೊತ್ತಾಗಿ ನಿಶ್ಚಿತಾರ್ಥ  ಆದಾಗ್ಲೂ ಕೇಳ್ದೆ, ಮುಂದೇನ್ ಕಥೆ? ಹುಣ್ಣಿಮೆ-ಹಬ್ಬ ದಿನವೂ ಬರತ್ತಾ ಅವನೇನಂದ ಗೊತ್ತೇ? ಯಧ್ಭವತಿ, ತದ್ಭವತಿ! ಏನಾಗತ್ತೋ ಆಗತ್ತೆ! ಭವಿಷ್ಯ ನಮ್ದೇನ್ ಕಾಣೋಕೆ? ಏನಾಗತ್ತೋ ಅದಾಗತ್ತೆ! ನನಗೀಗಿದ್ದಾರೆ ಪುಟ್ಟಿಪುಟ್ಟು  ಅಮ್ಮನ್ನ ಕೇಳ್ತಾರೆ ಮುಂದಿನ್  ಗುಟ್ಟು  ಎತ್ರ ಆಗ್ತ...