ಮಂಜಿನ ಚೆಂಡು (ಮಕ್ಕಳ ಕವಿತೆ)
ಮೂಲ ಕವಿತೆ - ಶೆಲ್ ಸ್ಪ್ರಿಂಗ್ ಸ್ಟೀನ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ಮಾಡಿದೆ ನಾನು ಮಂಜಿನ ಚೆಂಡು
ನೋಡಲು ಒಳ್ಳೆ ಬೆಳ್ಳಿಯ ಗುಂಡು
ನಾನೇ ಸಾಕುವೆ ಮುದ್ದಿನ ಚೆಂಡು
ಪಕ್ಕದಲ್ಲಿಯೇ ಮಲಗಿಸಿಕೊಂಡು
ಚಳಿ! ಎನ್ನುತ ಹೊದ್ದಿಕೆಯಲಿ ಸುತ್ತಿ
ಕೊಟ್ಟೆನು ದಿಂಬಿಗೆ ಮೆತ್ತನೆ ಹತ್ತಿ
ಬೆಳಗಾಯಿತು ಲಗುಬಗೆಯಲಿ ಎದ್ದೆ
ಎಲ್ಲಿರುವೆ ಓ ಮಂಜಿನ ಮುದ್ದೆ!
ಓಡಿಹೋಗಿತ್ತು! ನಾನಿದ್ದೆಯೊಳಿದ್ದೆ!
(ಹಾಸಿಗೆಯನು ಅದು ಮಾಡಿದೆ ಒದ್ದೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ