ಏನಾಗುತ್ತೋ ಆಗತ್ತೆ














ಮೂಲ - ರೇ ಈವಾನ್ಸ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ಆಲ್ಫ್ರೆಡ್ ಹಿಚ್ಕಾಕ್ ಅವರು ನಿರ್ದೇಶಿಸಿರುವ ಪ್ರಸಿದ್ಧ ಚಿತ್ರ "ದ ಮ್ಯಾನ್ ಹೂ ನ್ಯೂ ಟೂ ಮಚ್" ಚಿತ್ರದಲ್ಲಿ ನಟಿ ಡೋರಿಸ್ ಡೇ ಹಾಡಿದ "ಕೇ ಸೆರಾ, ಸೆರಾ! ವಾಟೆವರ್ ವಿಲ್ ಬೀ ವಿಲ್ ಬೀ!" ಎಂಬ ಹಾಡು ಇಂದಿಗೂ ಜನಪ್ರಿಯ. ಯೂಟ್ಯೂಬಿನಲ್ಲಿ ನಿಮಗೆ ಸಿಕ್ಕುತ್ತದೆ. ಮುಂದಾಗುವುದನ್ನು ನೋಡುವ ಕುತೂಹಲ ನಮಗೇಕೆ? ಏನಾಗುತ್ತೋ ಅದಾಗುತ್ತದೆ ಎಂಬ ಸಂದೇಶವಿರುವ ಈ ಹಾಡನ್ನು ಹಾಡಿದ ಡೋರಿಸ್ ಡೇ ಇಂದು ನಿಧನರಾಗಿದ್ದಾರೆಂಬ ಸುದ್ದಿ ಬಂದಿದೆ.  ತಮ್ಮ ಸೌಂದರ್ಯ ಮತ್ತು ನಟನೆಗೆ ಪ್ರಸಿದ್ಧರಾಗಿದ್ದ ಡೋರಿಸ್ ಡೇ ಅವರಿಗೆ ೯೩ ವರ್ಷ ವಯಸ್ಸಾಗಿತ್ತು. 


ಚಿಕ್ಕವಳು ಆಗ ನಾನು  ಇನ್ನೂ, 
ಅಮ್ಮನ್ನ ಕೇಳ್ದೆ, ಏನಾಗ್ತೀನಿ?
ಚೆಲುವೆ ಆಗ್ತೀನಾ, ಸಿರಿವಂತ್ಳಾಗ್ತೀನಾ?
ಅವಳ್ಹೇಳಿದ್ದೇನ್ ಗೊತ್ತೇ?
ಯಧ್ಭವತಿ, ತದ್ಭವತಿ! ಏನಾಗತ್ತೋ ಆಗತ್ತೆ!
ಭವಿಷ್ಯ ನಮ್ದೇನ್ ಕಾಣೋಕೆ?
ಏನಾಗತ್ತೋ ಅದಾಗತ್ತೆ!

ಮದುವೆ ಗೊತ್ತಾಗಿ ನಿಶ್ಚಿತಾರ್ಥ 
ಆದಾಗ್ಲೂ ಕೇಳ್ದೆ, ಮುಂದೇನ್ ಕಥೆ?
ಹುಣ್ಣಿಮೆ-ಹಬ್ಬ ದಿನವೂ ಬರತ್ತಾ
ಅವನೇನಂದ ಗೊತ್ತೇ?
ಯಧ್ಭವತಿ, ತದ್ಭವತಿ! ಏನಾಗತ್ತೋ ಆಗತ್ತೆ!
ಭವಿಷ್ಯ ನಮ್ದೇನ್ ಕಾಣೋಕೆ?
ಏನಾಗತ್ತೋ ಅದಾಗತ್ತೆ!

ನನಗೀಗಿದ್ದಾರೆ ಪುಟ್ಟಿಪುಟ್ಟು 
ಅಮ್ಮನ್ನ ಕೇಳ್ತಾರೆ ಮುಂದಿನ್  ಗುಟ್ಟು 
ಎತ್ರ ಆಗ್ತೀನಾ? ಸಿರಿವಂತ್ನಾಗ್ತೀನಾ?
ಉತ್ರ ಸಾಕಾಯ್ತ್ ಕೊಟ್ಟು!
ಯಧ್ಭವತಿ, ತದ್ಭವತಿ! ಏನಾಗತ್ತೋ ಆಗತ್ತೆ!
ಭವಿಷ್ಯ ನಮ್ದೇನ್ ಕಾಣೋಕೆ?
ಏನಾಗತ್ತೋ ಅದಾಗತ್ತೆ!








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)