ಸ್ನೇಹಿತರು (ಮಕ್ಕಳ ಕವಿತೆ)

Green and Pink Leaf Tree in Green Grass Open Field during Day Time


ಮೂಲ ಕವಿತೆ - ಆಬಿ ಫಾರ್ವೆಲ್ ಬ್ರೌನ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್


ಎಷ್ಟು ಚೆನ್ನ ಒಂದಷ್ಟು ಹೊತ್ತು ಈ ಮರದ ಕೆಳಗೆ ಅಂಗತ್ತ
ಮಲಗಿ ಮೇಲ್ಗಡೆಯ ಹಸಿರು ಚಪ್ಪರವ ಕಣ್ಣುಮುಚ್ಚಿ ನೋಡುತ್ತ

ಹಸಿರು ಚಪ್ಪರದ ಮೇಲೆ ಕಾಣುವುದು ಸ್ವಚ್ಛ ನೀಲ ಆಕಾಶ
ನನ್ನ ಕಡೆಗೆ ನೋಡುತ್ತ ಬೀರುತಿದೆ ನಭನೀಲ ಮಂದಹಾಸ

ಚಪ್ಪರದ ನಡುವೆ ತೂರುತ್ತ ಬಂದ ಹೊಂಗಿರಣ  ನವಿಲುಗರಿಯಂತೆ
ಮುಖವನ್ನು  ಸವರಿ ಮುತ್ತಿಟ್ಟು ತೋರುವುದು ತಾಯ ಪ್ರೇಮ-ಮಮತೆ!

ತಂಬೆಲರು ಹಾಡುವ ಮಧುರಗಾನ ಸವಿದಂತೆ ಮಧುರ ಜೇನು
ಕಾಣದಿದ್ದರೂ ರೂಪ, ಕಾಣುವೆನು ಅದರ ಪ್ರೀತಿ, ಒಲವನ್ನು

ಇಷ್ಟೆಲ್ಲ ಸ್ನೇಹಿತರು ತೋರುತಿರುವಾಗ ಮಮಕಾರ, ಕರುಣೆ, ಪ್ರೀತಿ
ಯಾವ ಮಗುವನೂ ಕಾಡಲಾರದು ಯಾವ ಬಗೆಯ ಭೀತಿ 

(c) ಸಿ. ಪಿ. ರವಿಕುಮಾರ್, ೨೦೧೯

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)