ನಗು (ಕವಿತೆ)
ನಗು
(ಮೂಲ ಹಿಂದಿ ಕವಿತೆ: ಹರಿವಂಶರಾಯ್ ಬಚ್ಚನ್)
ಏಕಾಂಗಿಯಾಗಿರುವಾಗ ಬಾ,
ಹೀಗೆ ಜನರ ನಡುವೆ ಇದ್ದಾಗ ಬಂದು
ನನ್ನನ್ನು ನಗುಪಾಟಲು ಮಾಡದಿರು ಎಂದು
ಕಂಬನಿಗೆ ತಿಳಿಹೇಳಿದಾಗ
ಅದು ನೀಡಿತು ಮಾರುತ್ತರ
ಜನರ ನಡುವೆ ಇದ್ದಾಗಲೂ ನೀನು
ಏಕಾಂಗಿ ಎಂದೇ ತೋರಿತು
ಅದಕ್ಕೇ ಬಂದೆ ನಿನ್ನ ಹತ್ತಿರ.
ಹೀಗೆ ಜನರ ನಡುವೆ ಇದ್ದಾಗ ಬಂದು
ನನ್ನನ್ನು ನಗುಪಾಟಲು ಮಾಡದಿರು ಎಂದು
ಕಂಬನಿಗೆ ತಿಳಿಹೇಳಿದಾಗ
ಅದು ನೀಡಿತು ಮಾರುತ್ತರ
ಜನರ ನಡುವೆ ಇದ್ದಾಗಲೂ ನೀನು
ಏಕಾಂಗಿ ಎಂದೇ ತೋರಿತು
ಅದಕ್ಕೇ ಬಂದೆ ನಿನ್ನ ಹತ್ತಿರ.
ಜೀವನದ ಓಟದಲ್ಲಿ ಅನುಭವ ಮಾಗಲಿಲ್ಲ,
ಹಸಿಯಾಗಿಯೇ ಉಳಿದು ಬಿಟ್ಟಿತು
ನಟನೆ ಕಲಿಯಲಾಗದೆ ಮನಸ್ಸು
ಮಗುವಾಗಿಯೇ ಉಳಿದು ಬಿಟ್ಟಿತು
ಬಾಲ್ಯದಲ್ಲಿ ಎಲ್ಲೆಂದರಲ್ಲಿ ಅಳುತ್ತಿದ್ದೆವು
ಎಲ್ಲೆಂದರಲ್ಲಿ ನಗುತ್ತಿದ್ದೆವು
ಆದರೆ ಈಗ
ನಗಲು ಬೇಕು ಮರ್ಯಾದೆಯ ಮುಸುಕು
ಮತ್ತು ಅಳಲು ಏಕಾಂತ!
ನಟನೆ ಕಲಿಯಲಾಗದೆ ಮನಸ್ಸು
ಮಗುವಾಗಿಯೇ ಉಳಿದು ಬಿಟ್ಟಿತು
ಬಾಲ್ಯದಲ್ಲಿ ಎಲ್ಲೆಂದರಲ್ಲಿ ಅಳುತ್ತಿದ್ದೆವು
ಎಲ್ಲೆಂದರಲ್ಲಿ ನಗುತ್ತಿದ್ದೆವು
ಆದರೆ ಈಗ
ನಗಲು ಬೇಕು ಮರ್ಯಾದೆಯ ಮುಸುಕು
ಮತ್ತು ಅಳಲು ಏಕಾಂತ!
ಯಾವ ಮುಲಾಜಿಲ್ಲದೆ ನಾನೂ ನಗುತ್ತಿದ್ದೆ ಹಿಂದೊಮ್ಮೆ.
ನನ್ನದೇ ಹಳೆಯ ಚಿತ್ರಗಳಲ್ಲಿ ಸಿಕ್ಕಿದೆ ಪುರಾವೆ.
ನನ್ನದೇ ಹಳೆಯ ಚಿತ್ರಗಳಲ್ಲಿ ಸಿಕ್ಕಿದೆ ಪುರಾವೆ.
ನಡೆ, ನಾವು ಮುಗುಳ್ನಗಲು ಹುಡುಕೋಣ ಕಾರಣ
ನೀನು ನನ್ನನ್ನು ಹುಡುಕು, ನಾನು ಹುಡುಕುವೆ ನಿನ್ನ.
ನೀನು ನನ್ನನ್ನು ಹುಡುಕು, ನಾನು ಹುಡುಕುವೆ ನಿನ್ನ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ