ಏರ್ ಪೋರ್ಟ್ ಬಾರಿನಲ್ಲಿ
ಏರ್ ಪೋರ್ಟ್ ಬಾರಿನಲ್ಲಿ ಅಮ್ಮನಿಗೆ ನಾನು ಚಿಂತಿಸಬೇಡ ಎಂದು ಹೇಳುತ್ತೇನೆ. ಸ್ಯಾನ್ ಆಂಡ್ರಿಯಾಸ್ ಫಾಲ್ಟ್ ಒಳಗೆ ಯಾರೂ ಜಾರಿ ಬಿದ್ದಿಲ್ಲ ಅಮ್ಮಾ. ಆದರೆ ಅವಳು ಒಣಗಿದ ಕಣ್ಣುಗಳನ್ನು ಒರೆಸಿಕೊಳ್ಳುವಾಗ ನನಗೆ ನೆನಪಾಗುತ್ತವೆ ಹಳೆಯ ಚಲಚ್ಚಿತ್ರಗಳು, ಅಲ್ಲಿ ಭೂಮಿ ಬಾಯಿ ಬಿಡುತ್ತಿತ್ತಲ್ಲ.
ಈ ಚಿತ್ರಗಳಲ್ಲಿ ಕಡ್ಡಾಯವಾಗಿ ಇರುತ್ತಿದ್ದರು ಒಬ್ಬ ಹೊಂಗೂದಲಿನ ಕೀಟ ಶಾಸ್ತ್ರಜ್ಞೆ, ನಾಲ್ವರು ಖದೀಮ ನಿಧಿಶೋಧಕರು, ಮತ್ತು ಕಾಡಿನಲ್ಲಾದರೂ ಚರ್ಮದ ಜ್ಯಾಕೆಟ್ ತೆಗೆಯಬೇಕೆಂದು ತಿಳಿಯದ ಒಬ್ಬ ಸ್ಫುರದ್ರೂಪಿ ಪೈಲಟ್.
ಅದೇ ಆ ಖದೀಮರ ಹುನ್ನಾರ ಏನಿತ್ತು ಅಂದರೆ ಚಿನ್ನ ಮತ್ತು ದಂತ ಕದ್ದು ಲಾಸ್ ಏಂಜಲೀಸ್ ನಗರದಲ್ಲಿ ಮನೆ ಮಾಡಿಕೊಂಡು ತಮ್ಮ ಅಮ್ಮಂದಿರಿಗೆ ಎಂದೋ ವರ್ಷದಲ್ಲಿ ಒಮ್ಮೆ ಫೋನ್ ಮಾಡುವುದು ಮತ್ತು ಅಮ್ಮನ ಮನೆಗೆ ಎಂದೂ ಮರಳದೇ ಇರುವುದು, ಮರಳಿದರೂ ಒಮ್ಮೆ ಒಂದೆರಡು ದಿನಗಳಿಗೆ ಮಾತ್ರ.
ಮೂಲ ಕವಿತೆ : ರಾನ್ ಕೋರ್ಟ್ಜೆ
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ