ಅಮ್ಮನ ಸೀಕ್ರೆಟ್




ಕಾವಲಿ ಮೇಲೆ ಕಾದಿದೆ ಕೆಂಪಗೆ
ಬಿಸಿಬಿಸಿ ರೊಟ್ಟಿ ನನಗೂ ಬೇಕು!
ಕಾವಲಿ ಹಾಗೆ ಕಾದಿದೆ ಹೊಟ್ಟೆ
ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು!

ಪರಿಮಳ ಬರುತಿದೆ ಘಮಘಮ ಎಂದು
ಇರಲಾಗದು ಬರಿಹೊಟ್ಟೆಯೊಳಿನ್ನು
ಕೈತೊಳೆದಾಗಿದೆ, ಬೇಕಾದರೆ ನೋಡು
ಹೇಳುವೆನೇ ಎಂದಾದರೂ ಸುಳ್ಳನ್ನು!

ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ
ಮೇಲ್ಗಡೆ ಕರಗುವ ತುಪ್ಪದ ಗಟ್ಟಿ
ಮುರಿಯಿತೇ ಅಯ್ಯೋ ಪರವಾಗಿಲ್ಲ
ಮುರಿದೇ ಬಾಯಿಗೆ ಹಾಕುವೆನಲ್ಲ!

ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ
ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ!
ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ
ಹೇಳಿಬಿಡಮ್ಮಾ ಸೀಕ್ರೆಟ್ ನನಗೆ!

ಎಂದರೆ ನಗುವಳು ಗಲ್ಲವ ಹಿಂಡುತ್ತಾ
ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ!
ಇರುವುದು ಅಮ್ಮಂದಿರ ಬಳಿ ಮಾತ್ರ
ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ!

ಕಾವಲಿ ಮೇಲೆ ಕಾದಿದೆ ಕೆಂಪಗೆ
ಬಿಸಿಬಿಸಿ ರೊಟ್ಟಿ ನನಗೂ ಬೇಕು
ಕಾವಲಿ ಹಾಗೆ ಕಾದಿದೆ ಹೊಟ್ಟೆ
ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)