ಪ್ರೇಮವನ್ನು ಸ್ವೀಕರಿಸು ಹಗುರಾಗಿ

ಮೂಲ: ಡಬ್ಲ್ಯು. ಬಿ. ಯೇಟ್ಸ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ಸಂಧಿಸಿದೆ ನನ್ನೊಲವನ್ನು ರಾಣಿಯ ಉದ್ಯಾನದೊಳಗೆ,
ಹಿಮದ ಹೆಜ್ಜೆ ಇಡುತ್ತಾ ಹೆಣ್ಣು ನಡೆದುಬಂದಳು ಬಳಿಗೆ,
ಹೇಗೆ ಚಿಗುರುವುದೋ ಹಸಿರೆಲೆ ಮರದಲ್ಲಿ ಹಾಗೆ,

ಪ್ರೇಮವನ್ನು ಸ್ವೀಕರಿಸು ಹಗುರವಾಗಿ ಎಂದಳು ನನಗೆ.
ಕೇಳುವ ವಿವೇಕವಿತ್ತೇ ನನ್ನ ಬಿಸಿರಕ್ತಕ್ಕೆ? ಹತ್ತಲಿಲ್ಲ ತಲೆಗೆ.


ನದಿಯ ಬಳಿ ಹೊಲದಲ್ಲಿ ಸಂಧಿಸಿದೆನು ನನ್ನೊಲವನ್ನು,
ಹೀಗೆಂದಳು ಹೆಗಲ ಮೇಲೆ ಹಿಮಶ್ವೇತ ಕೈಯಿಟ್ಟು ಹೆಣ್ಣು:
ನೋಡಿದೆಯಾ ಪಾತಿಯ ಮೇಲೆ ಬೆಳೆದ ಹುಲ್ಲನ್ನು?
ಹಾಗೆ ಸ್ವೀಕರಿಸು ಹಗುರವಾಗಿ ಪ್ರೇಮವನ್ನು.
ಅವಳ ಮಾತಿಗೆ ಬೆಲೆ ಕೊಡದೆ ಈಗ  ಕಂಬನಿ ಹರಿಸುತ್ತಿವೆ ಕಣ್ಣು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)