ಬಾಣ ಮತ್ತು ಹಾಡು

ಮೂಲ: ಎಚ್. ಡಬ್ಲ್ಯೂ. ಲಾಂಗ್ ಫೆಲೋ



ಬಿಲ್ಲಿಗೇರಿಸಿ ಬಿಟ್ಟರೆ ಬಾಣವನ್ನು ಗಾಳಿಯಲ್ಲಿ,

ಎಲ್ಲಿ ಹೋಗಿ ಬಿತ್ತೋ ಧರೆಯ ಪಾತಳಿಯಲ್ಲಿ!

ಎಷ್ಟು ತೀವ್ರವಾದದ್ದು ಎಂದರೆ ಶರವೇಗ,

ಹಿಂಬಾಲಿಸಿದ ಕಣ್ಣು ಸೋತುಹೋಯಿತು ಬೇಗ.


ಉಸಿರಿದೆನು ಗಾಳಿಯಲ್ಲಿ ನಾನೊಂದು ಹಾಡು,

ಎಲ್ಲಿ ಚೆದುರಿದವೋ ಪದ, ತಿಳಿಯೆನು ಜಾಡು!

ಹಾಡನ್ನು ಹಿಂಬಾಲಿಸಿ ಹೋಗುವ ಸಾಮರ್ಥ್ಯ

ಪಡೆದಿಲ್ಲ ಯಾವುದೇ ಸಾಧಾರಣ ಮರ್ತ್ಯ.


ಬಹುದಿನಗಳ ತರುವಾಯ ತೇಗದ ತರುವೊಂದರಲ್ಲಿ ಸಿಕ್ಕಿತು,

ನಾನಂದು ಹೂಡಿದ ಬಾಣ, ಕಂಡು ಮುಗುಳ್ನಕ್ಕಿತು,

ಸಿಕ್ಕಿತು ಮುಂದೊಂದು ದಿನ ಗೆಳೆಯನೊಬ್ಬನ ಎದೆಯಲ್ಲಿ

ಹಿಂದೊಂದು ದಿನ ನಾ ಗುನುಗಿದ ಗೀತೆಯ ಹೂಬಳ್ಳಿ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)