ನಂತರವೂ

ಮೂಲ: ಪಿ. ಬಿ. ಶೆಲ್ಲಿ

ಅನುವಾದ: ಸಿ. ಪಿ. ರವಿಕುಮಾರ್



 ಹಾಡುವ ಗಾಯಕರು ನಿಲ್ಲಿಸಿದರೂ ಸಮೂಹಗಾನ

ಕಿವಿಯಲ್ಲಿ ಹಾಡಿನದೇ ಅನುರಣನ

ಘಮಘಮ ಪರಿಮಳ ಸೂಸುತ್ತಿದ್ದ  ಮಲ್ಲಿಗೆ

ಬಾಡಿದ ಮೇಲೂ ಸೌರಭಸಾಧನ

ಶವವಸ್ತ್ರದ ಮೇಲೆ ಹರಡುವರು 

ಗುಲಾಬಿಯು ಸತ್ತರೂ ಪಕಳೆಗಳನ್ನ

ಹಾಗೇ ನೀನು ತೆರಳಿದ ನಂತರವೂ ಪ್ರೇಮವು

ಸಿಹಿನಿದ್ದೆಯಲ್ಲಿ ಕಾಣುವುದು ಸ್ವಪ್ನ


.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)