ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

 


ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ


ಎಲ್ಲ ನನಗೆ ಬೇಕು ಎಂದು

ಅಗೋ ಅಲ್ಲಿ ಮರಿಯು ಒಂದು

ಎಂಥ ಹೊಟ್ಟೆಬಾಕ!

ನಿನ್ನ ಹಾಗೇ ಅಲ್ಲವೇನು

ತಿಂದೆ ನಾಲ್ಕು ಜಾಮೂನು

ಬಿಡದೆ ತೊಟ್ಟು ಪಾಕ!


ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ


ಹಂಚಿಕೊಂಡು ತಿಂದರೆ

ಹೊಟ್ಟೆಗಿಲ್ಲ ತೊಂದರೆ

ಇಬ್ಬರಿಗೂ ತೃಪ್ತಿ!

ಸರಿ ಹಾಗಾದರೆ ಅಕ್ಕಾ

ನೆನ್ನೆ ನಿನಗೆ ಸಿಕ್ಕ

ಚಾಕೋಲೇಟ್ ಫಿಫ್ಟಿ ಫಿಫ್ಟಿ!


ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ


ಸಿ. ಪಿ. ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)