ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ

ಮೂಲ: ಜಾನ್ ಕೀಟ್ಸ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್





ಕವಿತೆ ಓದುವ ಮುನ್ನ:

ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ.  ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ.  ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ.  ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ.  ಪ್ರಸ್ತುತ  ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು. 


ಕವಿತೆ:

ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ
ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃ
ಸ್ವಪ್ನ 
ಮನೆಯೊಡತಿ ನಡುಬಗ್ಗಿಸಿ ಕಡೆದಿಟ್ಟ ಬೆಣ್ಣೆಯು
ಇಲಿಹೆಗ್ಗಣಗಳ ಪಾಲಾದ ದುಃಸ್ವಪ್ನಕ್ಕಿಂತಲೂ
ಭಯಂಕರ! ಬೆದರಿದ ರಾಜ ವ್ಯಯಿಸದೇ ಕ್ಷಣವೂ ಕಾಲ
ಹೇಳಿಕರೆಸಿದ ಆಸ್ಥಾನದ "ಮೇಧಾವಿ-ಮಾರ್ಜಾಲ".
ಎಲ್ಲರೂ ಸೋತರೂ ಡೇನಿಯೆಲ್ ಮಾತ್ರ ಕಸಿದುಕೊಂಡನು
ಬೆಳಕು ರಾಜನ ಕಣ್ಣಿನಿಂದ. ಅವನು ಹೀಗೆ ಘೋಷಿಸಿದ:
ರಾಜ, ನನಗೆ ಹುಲ್ಲಿಗಿಂತಲೂ ಕಡೆ ನಿನ್ನ ರಾಜದಂಡ!
ಇಂಥದ್ದೇ ಭಯಂಕರ ಕನಸು ಬೀಳುತ್ತಿದೆಯಂತೆ ಈನಡುವೆ
ಹುಚ್ಚು ಧೈರ್ಯದ ನಿನ್ನ ಮೂರ್ಖ ಮಂತ್ರಿವರ್ಗಕ್ಕೆ,
ಕಂಪಿಸುತ್ತಾ ವಿವರ್ಣಗೊಳ್ಳುತ್ತವಂತೆ ಅವರ ಸುಳ್ಳಾಡುವ ತುಟಿಗಳು
ಡೇನಿಯೆಲ್ ವೇಷದಲ್ಲಿ ಯಾರೇ ಅಬ್ಬೇಪಾರಿ ಬಂದು
"ಆ ಬಂಗಾರದ ತಲೆ ನಿನ್ನದೇ" ಎಂದು ಪ್ರಕಟಿಸಿದ ಕೂಡಲೇ.


ಕಾಮೆಂಟ್‌ಗಳು

  1. Before he went to live with owls and bats,
    Nebuchadnezzar had an ugly dream,
    Worse than a housewife’s, when she thinks her cream
    Made a naumachia for mice and rats:
    So scared, he sent for that “good kind of cats,”
    Young Daniel, who did straightway pluck the beam
    From out his eye, and said – “I do not deem
    Your sceptre worth a straw, your cushions old door mats.”
    A horrid nightmare, similar somewhat,
    Of late has haunted a most valiant crew
    Of loggerheads and chapmen; – we are told
    That any Daniel, though he be a sot,
    Can make their lying lips turn pale of hue,
    By drawing out – “Ye are that head of gold!"

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)