ಚಾರ್ಲಿ ಚಾಪ್ಲಿನ್ ಪ್ರಸಂಗ

 



ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ

ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು

ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು

ತಟ್ಟಿದರು ಚಪ್ಪಾಳೆ.  ಕಾದು ಕೂತರು ಮುಂದಿನ ಹಾಸ್ಯಚಟಾಕಿಗೆ.

ಹೇಳಿದ ಪ್ರಸಂಗವನ್ನೇ ಚಾರ್ಲಿ ಹೇಳಿದನು ಮತ್ತೊಮ್ಮೆ.

ಕೇಳಿ ನಕ್ಕರು ಹಲವರು, ಕೆಲವರು ಮಾಡಿದರು ಕರತಾಡನ.

ಅದೇ ಹಾಸ್ಯಪ್ರಸಂಗ ಮೂರನೇ ಸಲ ಪುನರುಚ್ಚರಿಸಿ

ಕಾದನಂತೆ ಚಾರ್ಲಿ ಸಭಿಕರ ಪ್ರತಿಕ್ರಿಯೆಗೆ.

ಮೌನವಾಗಿತ್ತು ಸಭಾಭವನ. ಒಬ್ಬರೂ ನಗಲಿಲ್ಲ.

ಏನಿದು ಹುಡುಗಾಟ ಎಂಬಂತಿತ್ತು ಎಲ್ಲರ ಭಾವ.

ಆಗ ಹೇಳಿದನಂತೆ ಚಾರ್ಲಿ: ನೋಡಿದಿರಾ! ಒಂದೇ

ನಗೆಪ್ರಸಂಗಕ್ಕೆ ನಗುವುದಿಲ್ಲ ಯಾರೂ ಪದೇಪದೇ

ಅಳುವಿರಿ ಹೇಳಿ ಹಾಗಾದರೆ ಏಕೆ  ಮತ್ತೆ ಮತ್ತೆ ನೆನೆನೆನೆದು

ಹಳೆಯ ಯಾವುದೋ ದುಃಖವನ್ನು ಬಗೆ ಬಗೆದು?


- ಸಿ. ಪಿ. ರವಿಕುಮಾರ್ 

ಏಪ್ರಿಲ್ ೨೦, ೨೦೨೪

ಕಾಮೆಂಟ್‌ಗಳು

  1. ಪದೇಪದೇ ನಗುವಿನ ಪ್ರಸಂಗವನ್ನು ಜನಗಳ ಮುಂದೆ ತಂದು ಉದಾಹರಿಸಿ ಪದೇಪದೇ ಅಥವಾ ಕೊರಗುವ ಮನಸ್ಸಿಗೆ ಬುದ್ಧಿ ಹೇಳಿರುವುದು ಎಲ್ಲಾ ಕಾಲಕ್ಕೂ ಹೊಂದುವ ಉತ್ತಮ ದೃಷ್ಟಾಂತ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)