ಒಬ್ಬಂಟಿ



ಬಹಳ ಮುಖ್ಯ

ನೀನು ಹೊರಗೆ ಹೋಗಿ ಒಬ್ಬಂಟಿ

ವಿರಮಿಸುವುದು ಒಂದು ಮರದ ಕೆಳಗೆ,

ಆಗ ಜೊತೆಯಲ್ಲಿ ಕೊಂಡೊಯ್ಯದಿರು

ಯಾವುದೇ ಪುಸ್ತಕ, ಯಾರೇ ಸಹಚರ

ನಿನ್ನನ್ನು ಹೊರತು.

ಗಮನಿಸು 

ಕೆಳಗೆ ಬೀಳುವ ಎಲೆಯನ್ನು,

ನೀರು ದಡಕ್ಕೆ ಬಡಿಯುವ ಸದ್ದನ್ನು,

ಕೇಳು ಮೀನುಗಾರರ ಹಾಡನ್ನು.

ಹಕ್ಕಿಯ ಹಾರಾಟವನ್ನು ನೋಡು,

ಮತ್ತು ಗಮನಿಸು ನಿನ್ನದೇ ಆಲೋಚನೆಗಳನ್ನು:

ನಿನ್ನ ಮನೋಭೂಮಿಕೆಯಲ್ಲಿ

ಅವು ಒಂದು ಇನ್ನೊಂದರ ಬೆನ್ನಟ್ಟಿ ಹೋಗುವುದನ್ನು.

ಹೀಗೆ ನೀನು ಒಬ್ಬನೇ ಇವನ್ನೆಲ್ಲ ಗಮನಿಸಬಲ್ಲೆಯಾದರೆ

ದಕ್ಕುವುವು ಅನರ್ಘ್ಯ ಐಶ್ವರ್ಯಗಳು ನಿನಗೆ

ಅವುಗಳ ಮೇಲೆ ಹೇರಲಾರದು ತೆರಿಗೆ ಯಾವುದೇ ಸರಕಾರ

ಅವುಗಳನ್ನು ಭ್ರಷ್ಟಗೊಳಿಸಲಾಗದು ಯಾವುದೇ ಮಾವನಾಧಿಕಾರ

ಅದು ಯಾರೂ ನಾಶ ಮಾಡಲಾಗದ ಕೋಶಾಗಾರ.


ಜಿಡ್ಡು ಕೃಷ್ಣಮೂರ್ತಿ

(ಕನ್ನಡಕ್ಕೆ: ಸಿ. ಪಿ. ರವಿಕುಮಾರ್)


[ಕ್ಯಾಮೆರಾ ಕೂಡಾ ಬೇಡ :) ]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)