ಸುಲಭ ಎನ್ನುತಿಹನು ಕಬೀರ

ಮೂಲ: ಮಹಾತ್ಮಾ ಕಬೀರ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ಕಣ್ಣಿಗೆ ಹೇಗೆ ಕಾಣುವುದೋ ಅದಲ್ಲ

ವರ್ಣಿಸಲಾಗದು ಏನೆಂದು, ಇಲ್ಲ ಪದಗಳಾಧಾರ.


ನೋಡದೇ ಹೇಗೆ ಬಂದೀತು ನಂಬಿಕೆ?

ಅರ್ಥವಾದೀತೆ ಮಾಡದೇ ಶಬ್ದಲೋಕವಿಹಾರ?


ಪದಗಳ ಪರಿಚಯ ಬರೀ ಜ್ಞಾನಿಗೆ ಮಾತ್ರ

ಅಜ್ಞಾನಿಗೆ ಬರಿ ವಿಸ್ಮಯಿಸುವ ಪರಿಹಾರ.


ನಿರಾಕಾರನೆಂದು ಪೂಜಿಸುವರು ಕೆಲವರು

ಕೆಲವರಿಗೋ ದೇವನು ಹಲವು ರೂಪ ಪ್ರಕಾರ.


ದೇವನು ಇವೆರಡನ್ನೂ ಮೀರಿದವನೆಂದು

ಜ್ಞಾನಿಯು ತಿಳಿದ ವಿಚಾರ.


ಬರೆದಿಡಲಾಗದ ರಾಗವು ದೇವರು,

ಹಾಕಲಾಗುವುದೆ ಪ್ರಸ್ತಾರ?


ಸುರತ ನಿರಋತಗಳನು ಅರಿತವನಿಗೆ ಮಾತ್ರ

ಸುಲಭ ಎನ್ನುತಿಹನು ಕಬೀರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)