ನಾನು

ಮೂಲ: ಚಾರ್ಲ್ಸ್ ಕಾಸ್ಲೆ

ಅನುವಾದ: ಸಿ. ಪಿ. ರವಿಕುಮಾರ್

ಹಕ್ಕಿಯನ್ನು ಹಾಡುವ ಹಾಡು ನಾನು,
ನಾನು ಭೂಮಿಯನ್ನು ಬೆಳೆವ ಎಲೆ.
ನಾನು ಚಂದ್ರಮನನ್ನು ಚಲಿಸುವ ಅಲೆ,
ನಾನು ಮರಳನ್ನು ತಡೆಹಿಡಿವ ನೀರ ಸೆಲೆ.
ನಾನು ಬಿರುಗಾಳಿಯನ್ನಟ್ಟಿ ಓಡಿಸುವ ಮುಗಿಲು,
ನಾನು ಸೂರ್ಯನನ್ನು ಬೆಳಗಿಸುವ ಭೂಮಿ.
ಕಲ್ಲಿನ ಮೇಲೆರಗುವ ಬೆಂಕಿಯ ಕಿಡಿ ನಾನು,
ನಾನು ಕೈಗಳನ್ನು ರೂಪಿಸುವ ಜೇಡಿಮಣ್ಣು,
ಆ ಸದ್ದು ನಾನು ಯಾವುದು 
ಉದ್ಗರಿಸುವುದೋ ಮನುಷ್ಯನನ್ನು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)