ಅತಿಥಿಪಾತ್ರ
ನನ್ನ ಮೇಜಿನ ಮೇಲೆ ಕೂತಿದೆ
ಅಮೃತ ಶಿಲೆಯ ಮೇಲೆ ಕುಸುರಿ ಕೆಲಸದ
ಪೆನ್ ಹೋಲ್ಡರ್
ಅಲ್ಲಿವೆ ಒಂದಕ್ಕಿಂತ ಒಂದು ಚೆಂದದ ಪೆನ್
ಓವರ್ ವೇಟ್ ಎನ್ನಿಸುವ ಕಪ್ಪು ಬಣ್ಣದ್ದು
ಸಮ್ಮೇಳನದ ಹೆಸರನ್ನು ಹೊತ್ತ ನೀಲಿ ಬಣ್ಣದ್ದು
ಕಂಪನಿಯ ಹೆಸರುಳ್ಳ ಕೆಂಪು ಬಣ್ಣದ್ದು
ಎಣಿಸಿದರೆ ಹತ್ತಾದರೂ ಇರಬಹುದು ಸಂಖ್ಯೆ
ಎಲ್ಲ ಬಾಲ್ ಪಾಯಿಂಟ್, ಈಗಿಲ್ಲ ಇಂಕೇ
ಬೇಕಾದಾಗ ಕೈಗೆತ್ತಿಕೊಂಡು ಬರೆದಾಗ ಮಾತ್ರ
ಬಯಲಾಗುವುದು ಇವುಗಳದ್ದು ಬರೀ ಅತಿಥಿ ಪಾತ್ರ
ಗೋಗರೆದರೂ ಬೈದರೂ "ಬರೆ ಬರೆ" ಎಂದು
ಅಕ್ಷರ ಹಾಗಿರಲಿ ಮೂಡದು ಗೆರೆ ಒಂದು!
ಕೊನೆಗೆ ಸಿಕ್ಕುವ ಐದು ರೂಪಾಯಿ ಪೆನ್ನು
ಬರೆಯಲು ಅದಕ್ಕೆ ಉತ್ಸಾಹವಿದೆ ಇನ್ನೂ!
- ಸಿ.ಪಿ. ರವಿಕುಮಾರ್
ಅತಿಥಿಗಳು ಎಂದರೆ ಹಾಗೇ. ಅಲಂಕಾರ ಮಾಡಿಕೊಂಡು ನೋಡಲು ಸ್ಮಾರ್ಟ್, ಬೇಕೆಂದಾಗ ಉಪಯೋಗಕ್ಕೆ ಬಾರರು. ಬಳಸಲು ಶುರು ಮಾಡುವಾಗಲೆಲ್ಲಾ ಅವರು ಬಹುತೇಕ ಭಾರವೇ. ಆ ಬದಲು ನಾವು ಬೆಲೆ ಕೊಡದ ಹೆಚ್ಚು ಜನರು ಹೆಚ್ಚು ಮೌಲ್ಯದಾಯಕರು. ಲೇಖನ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ