ಕಾವ್ಯಕಲೆಯ ಮೇಲೊಂದು ಟಿಪ್ಪಣಿ
ಮೂಲ: ಡೈಲಾನ್ ಥಾಮಸ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕನಸಿನಲ್ಲೂ ನಾನು ಎಣಿಸಿರಲಿಲ್ಲ:
ಪುಸ್ತಕಗಳ ಹೊದ್ದಿಕೆಗಳ ನಡುವಣ ಜಗತ್ತಿನಲ್ಲಿ
ನಡೆಯುತ್ತಿರಬಹುದು ಏನೆಲ್ಲ,
ಪದಗಳ ಉಷ್ಣ-ಶೈತ್ಯ ಬಿರುಗಾಳಿಗಳು,
ಅದೆಂಥ ಪರಮಶಾಂತಿ, ಅದೆಂಥ ಗಟ್ಟಿಯಾದ ನಗು,
ಇನ್ನೂ ಇಂಥವೇ ಮತ್ತು ಕಣ್ಣುಕುಕ್ಕುವ ಬೆಳಕು
ಪುಟಗಳ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ,
ಚೂರುಚೂರಾಗಿ
ಪದ, ಪದ, ಮತ್ತು ಇನ್ನಷ್ಟು ಪದಗಳಾಗಿ
ಪ್ರತಿಯೊಂದೂ ಪಡೆದುಕೊಂಡು ಅಮರತ್ವ ಬಾಳುತ್ತಾ ಅನಂತಕಾಲಕ್ಕೂ,
ಪ್ರತಿಯೊಂದಕ್ಕೂ ತನ್ನದೇ ಆನಂದ, ವೈಭೋಗ,ವೈಚಿತ್ರ್ಯ,ಬೆಳಕು.
Beautiful translation 👌🏻
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು
ಪ್ರತ್ಯುತ್ತರಅಳಿಸಿ