ಪುಸ್ತಕ

ಮೂಲ ಕವಿತೆ: ಎಮಿಲಿ ಡಿಕಿನ್ಸನ್ 
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 

Image result for book library

ಕೊಂಡೊಯ್ಯಲು ಕಾಣದ ಕಡಲಾಚೆಯ ನಾಡಿಗೆ
ಬೇರಾವ ಹಡಗೂ ಇಲ್ಲ ಹೊತ್ತಿಗೆಯನ್ನು ಮೀರಿ 
ಜಿಗಿಯುತ್ತ ಸಾಗುವ ಕವಿತೆಯ ಸಾಲಿಗೂ ಮೀರಿ 
ಮತ್ತೊಂದಿಲ್ಲ ಕುದುರೆ ಸವಾರಿ 
ಕಡುಬಡವರಿಗೂ ಕೈಗೆಟಕುವ ಪ್ರಯಾಣ!
ಯಾವುದೇ ಸುಂಕವನ್ನೂ ಬೇಡದ ಪಥ!
ನಿದರ್ಶನದಂತಿದೆ  ಮಿತವ್ಯಯವೆಂಬುದಕ್ಕೆ 
ಆತ್ಮವನ್ನು ಹೊತ್ತು ಮುನ್ನುಗ್ಗುವ ರಥ!

There is no frigate like a book
To take us lands away,
Nor any coursers like a page
Of prancing poetry.
This traverse may the poorest take
Without oppress of toll;
How frugal is the chariot
That bears a human soul! 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)