ಯಾವೊಬ್ಬ ಮಾನವನೂ ದ್ವೀಪವಲ್ಲ

ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್ 
ಅನುವಾದ - ಸಿ. ಪಿ. ರವಿಕುಮಾರ್ 
Photo of Rock Cliff in the Middle of Body of Water

ಯಾವೊಬ್ಬ ಮಾನವನೂ ದ್ವೀಪವಲ್ಲ 
ಯಾರೊಬ್ಬನೂ ತಾನೇ ಪೂರ್ಣನಾಗ.   
ಪ್ರತಿಯೊಂದೂ ಭೂಖಂಡದ ಅಂಶ,
ಮೂಲವೊಂದರ ಪುಟ್ಟ ಭಾಗ. 

ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು 
ಕೊಚ್ಚಿ ಕೊಂಡೊಯ್ದರೆ  ಕಡಲು 
ಉಂಟಾಗುವುದು ಅಷ್ಟೇ ಚ್ಯುತಿ ಮೂಲಭೂಖಂಡಕ್ಕೆ 
ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು;
ಕಳೆದು ಹೋದರೆ ಹೇಗಿದ್ದೀತು  
ನಿನ್ನ ಗೆಳೆಯನಿಗೋ ನಿನಗೋ  ಸೇರಿದ ಜಹಗೀರು. 

ಪ್ರತಿಯೊಬ್ಬ ಮಾನವನ ಸಾವೂ 
ಕುಂದಿಸುತ್ತದೆ ನನ್ನನ್ನು 
ಏಕೆಂದರೆ  ನಾನು ಮಾನವತೆಯ ಅಂಗ.  
ಪ್ರಶ್ನಿಸದಿರು ಯಾರಿಗಾಗಿ ಬಾಜಿಸುತ್ತಿದೆ ಗಂಟೆ ಎಂದು! 
ಬಾಜಿಸುತ್ತಿದೆ ನಿನಗಾಗಿ ಮೃದಂಗ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)