ಮೊದಲು

ಮೂಲ ಉರ್ದೂ ಗಜಲ್: ಕಿಶ್ವರ್ ನಾಹೀದ್ (ಪಾಕೀಸ್ತಾನ್)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 


ವಿಶ್ವಾಸ ನಂಬಿಕೆಗಳಲ್ಲಿ ಕಳೆದು ಹೋಗಿದ್ದೆ ಮುಂಚೆ
ಇಂದಿಗೂ ನಾನಿರುವುದು ಎಲ್ಲಿದ್ದೆನೋ ಮೊದಲು

ಆಸೆಗಳು ನೆರಿಗೆಗಳಾಗಿ ಹೊಮ್ಮಿದವು 
ಇದ್ದವು ಎದೆಯಲ್ಲಿ ಗಾಯಗಳು ಮೊದಲೇ 

ಈಗಂತೂ ಅಳುತ್ತೇನೆ  ಪ್ರತಿಯೊಂದು ಮಾತಿಗೂ 
ಲಾಭ ನಷ್ಟಗಳ ಲೆಕ್ಕ ಹಾಕುತ್ತಿದ್ದೆ ಮೊದಲು 

ಎದೆಯಿಂದ ಹೊರಗೆ ತೆಗೆದಂತೆ ಯಾವುದೋ ಮುಳ್ಳು 
ಕಣ್ಣುಗಳಿಂದ ನೀರು ಹರಿಯುತ್ತಿದ್ದವು ಮೊದಲೇ 

ಸಭೆಗೆ ಈಗೇನಿದ್ದರೂ ಹಾಜರಿ ಹಾಕಬೇಕೆಂದು ಅಷ್ಟೇ 
ಹೃದಯ  ಕೈಯಲ್ಲಿ ಹಿಡಿದು ಬರುತ್ತಿದ್ದೆ ಮೊದಲು 

ಹೆಗಲಿನ ಮೇಲಿರುವುದು ತಲೆಯೋ ಇಲ್ಲ ಹಿಮಗಲ್ಲೋ 
ನಾಲಗೆಯಿಂದ ಹೊರಡುತ್ತಿದ್ದವು ಜ್ವಾಲೆಗಳು ಮೊದಲು 

ಪ್ರತಿಯೊಂದು ಜುಲುಮೆಗೂ ಈಗ ಮುಕ್ತದ್ವಾರ 
ಸಣ್ಣ ಸಂಗತಿಯೂ ನೋವು ನೀಡುತ್ತಿತ್ತು ಮೊದಲು 

ನನಗೆ ಒಡಹುಟ್ಟಿದ ಸೋದರಿ ಈ ನನ್ನ ಮೌನ 
ಇಂಥ ಸಂಬಂಧಗಳಾದರೂ ಎಲ್ಲಿದ್ದವು ಮೊದಲು?

ಕಾಮೆಂಟ್‌ಗಳು


  1. हम कि मग़लूब-ए-गुमाँ थे पहले
    फिर वहीं हैं कि जहाँ थे पहले
    ख़्वाहिशें झुर्रियाँ बन कर उभरीं
    ज़ख़्म सीने में निहाँ थे पहले
    अब तो हर बात पे रो देते हैं
    वाक़िफ़-ए-सूद-ओ-ज़ियाँ थे पहले
    दिल से जैसे कोई काँटा निकला
    अश्क आँखों से रवाँ थे पहले
    अब फ़क़त अंजुमन-आराई है
    ए'तिबार-ए-दिल-ओ-जाँ थे पहले
    दोश पे सर है कि है बर्फ़ जमी
    हम कि शोलों की ज़बाँ थे पहले
    अब तो हर ताज़ा सितम है तस्लीम
    हादसे दिल पे गिराँ थे पहले
    मेरी हम-ज़ाद है तन्हाई मिरी
    ऐसे रिश्ते भी कहाँ थे पहले

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)