ಬೇಕಾದಷ್ಟು ಪಿನ್ನು



ಬೇಕಾದಷ್ಟು ಪಿನ್ನು 

ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 



ಬದುಕಿನ ಅರ್ಥ 
ಸಾಯುವುದೆಂದೇ ಆಗಿಬಿಟ್ಟಿದೆ
ಹಾಗೂ 
ಬದುಕಲು ದಿನಗಳು 
ಬೇಕಾದಷ್ಟಿವೆ ಇನ್ನೂ 

ಕಾಲದ ಮೇಜಿನ ಮೇಲೆ 
ಸೂಜಿ ಚುಚ್ಚಲು ಇಟ್ಟ 
ದಿಂಬಿನಂತಿದೆ ಬದುಕು; 
ಸ್ನೇಹದ ಅರ್ಥ 
ಚುಚ್ಚುವುದೆಂದೇ ಆಗಿಬಿಟ್ಟಿದೆ 
ಹಾಗೂ 
ಚುಚ್ಚಲು ಇವೆ  ಬೇಕಾದಷ್ಟು ಪಿನ್ನು

ಕೆಳ ಮಧ್ಯಮ ವರ್ಗದ  
ಅಲ್ಪ ಮಾಸಿಕ ವೇತನದಂತಿದೆ ಬದುಕು; 
ವೇತನದ ಅರ್ಥ 
ತೀರಿಸುವುದೆಂದೇ ಆಗಿಬಿಟ್ಟಿದೆ
ಹಾಗೂ 
ತೀರದಷ್ಟಿವೆ ಎಣಿಸಿದರೆ ಋಣಗಳನ್ನು 

Kannada Translation by C.P. Ravikumar of a Hindi Poem by Kunwar Bechain

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)