ಸಂಪೂರ್ಣ ಆಹಾರ
ಈ ಕವಿತೆಯನ್ನು ಬರೆದವಳು ಲೆಗ್ನಾ ರಾಡ್ರಿಗ್ಸ್ ಎಂಬ ಕ್ಯೂಬನ್ ಕವಯಿತ್ರಿ (೧೯೮೪-). ಅಮೆರಿಕಾ ದೇಶಕ್ಕೆ ಹೋದಾಗ ತನ್ನ ಅನುಭವಗಳನ್ನು ದಾಖಲಿಸಿ ಈಕೆ ಕವಿತೆಗಳನ್ನು ರಚಿಸಿದ್ದಾಳೆ. ಅಮೆರಿಕಾದಲ್ಲಿ ಸಾವಯವ ಆಹಾರ, ಸಂಪೂರ್ಣ ಆಹಾರ ಇವೆಲ್ಲಾ ಜನಪ್ರಿಯವಾಗಿವೆ. ಇಂಥದೊಂದು ಸಂಪೂರ್ಣ ಆಹಾರ ಮಳಿಗೆಗೆ ಹೋದಾಗ ಕವಯಿತ್ರಿಗೆ ಅವೆಲ್ಲಾ ಎಷ್ಟು "ಸಹಜ" ಅಥವಾ ನೈಸರ್ಗಿಕವೋ ಅಷ್ಟೇ ಕೃತಕವೂ ಎಂಬಂತೆ ತೋರುತ್ತವೆ. ಹೂಕೋಸಿನಲ್ಲಿ ಹುಳುಗಳು ಇರುವುದು ಸಹಜ ತಾನೇ! "ನೈಸರ್ಗಿಕ' ಜೋಳದ ಕಾಳು ತಿಂದಾಗ ಮುಖದ ಮೇಲೆ ಕಾಂತಿ ಬರುವುದೆಂಬ ಜಾಹೀರಾತು ನೋಡಿದಾಗ ಕವಯಿತ್ರಿಯ ಮುಖದಲ್ಲಿ ವ್ಯಂಗ್ಯದ ನಗುವೊಂದು ಬೆಳಗುತ್ತದೆ. ಹಸಿವನ್ನು ನೀಗುವ ಆಹಾರವನ್ನು ಇಷ್ಟೊಂದು ಗಂಭೀರವಾಗಿ ಇಷ್ಟೊಂದು ಗೋಜಲು ಮಾಡುವುದು ಕವಯಿತ್ರಿಗೆ ಸೋಜಿಗವೆನ್ನಿಸುತ್ತದೆ.
ಮೂಲ ಸ್ಪಾನಿಷ್ ಕವಿತೆ: ಲೆಗ್ನಾ ರಾಡ್ರಿಗ್ಸ್ ಇಗ್ಲೇಸಿಯಾಸ್
ಕನ್ನಡಕ್ಕೆ: ಸಿ.ಪಿ. ರವಿಕುಮಾರ್
ಸರಿಯಪ್ಪ. ಬೀಜವೆಂದರೆ ಬೀಜ. ನಡುವೆ
ಸರಿಯಪ್ಪ. ಬೀಜವೆಂದರೆ ಬೀಜ. ನಡುವೆ
ಅಣಬೆ, ಕಡಲಜೊಂಡು, ಕ್ರಿಸ್ಟಿಯಾನ್ ಡಿಯೋರ್ ಅತ್ತರು.
ಸಾವಿವೆ ಎಣ್ಣೆಯೂ ಇದೆ ಸ್ವಾಮೀ
ತವಾ ಮೇಲೆ ಮೀನು ಹುರಿಯಲು.
ಇಲ್ಲಿ ಸಿಕ್ಕದೆ ಇರುವುದೇ ಇಲ್ಲ. ಕೀನ್ವಾ ರೊಟ್ಟಿ,
ಹಣ್ಣು, ಗಿಣ್ಣು. ಹೂಕೋಸಿನಲ್ಲಿ ವಿಲವಿಲ ಹುಳು.
ಎಲ್ಲವೂ ಸ್ವಾದದಲ್ಲಿ ಪರಿಶುದ್ಧ; ನನ್ನ ಚಹರೆ
ಬೆಳಗುವುದು ಬೆಳಗಿದಾಗ ಒಳಗೆ ಜೋಳದ ಕಾಳು.
ಕವಿತೆಯಿಲ್ಲ. ಸಂಗೀತವಿಲ್ಲ. ಸಿನಿಮಾ ಇಲ್ಲ. ನಾಟಕವಿಲ್ಲ.
ಕಡೆಗೆ ವಾಸ್ತುಶಾಸ್ತ್ರವೂ ಇಲ್ಲ. ನಾನು ಬಂದಿರುವುದು ಇಲ್ಲಿಗೆ
ತುಂಬಿಕೊಳ್ಳುವುದಕ್ಕೆ ಒಳಗಿನ ಖಾಲೀತನ. ಮತ್ತದು
ನನ್ನೊಳಗೆ ತುಂಬಿಯೇ ತೀರುವುದು ಮೆಲ್ಲಗೆ.
ಏಕೆಂದರೆ ಬರೆಯುವುದನ್ನು ಬಿಟ್ಟು ಹಸಿವಿನ ಉತ್ತರಕ್ಕಾಗಿ ಕಿವಿಗೊಟ್ಟು
ನಿಂತಾಗಲೇ ತಾನೆ ಚೆಲುವಿಗೆ ದಕ್ಕುವುದು ಅಸ್ತಿತ್ವದ ಚೌಕಟ್ಟು.
Original:
ಪ್ರತ್ಯುತ್ತರಅಳಿಸಿFine, so a seed is a seed.
Mushrooms and Seaweed, Christian Dior.
Sesame oil, señor,
for searing fish on the grill.
Everything has its place. Quinoa tortillas.
Fruit and cheese. Maggot in cauliflower.
Nothing is flavoured with another flavour.
I shine because corn shines inside.
No poem. No music. No cinema.
No theatre. Not even architecture.
I only came to fill what’s empty.
And I will be empty. Because beauty
will only exist when I stop to write
and listen for hunger’s answer.