ಅಪೂರ್ಣ ಆಸೆಗಳ ಕಳಂಕ ತೊಳೆವ ಪ್ರೇಮವೆ!
ಸಿ ಪಿ ರವಿಕುಮಾರ್
ಮದನ್ ಮೋಹನ್ ಸಂಗೀತ ನಿರ್ದೇಶನದಲ್ಲಿ ಮೂಡಿದ ಅನೇಕ ಉತ್ತಮ ಗಜಲ್ ಗಳಲ್ಲಿ "ಯೂಂನ್ ಹಸರತೋಂನ್ ಕೆ ದಾಗ್ ಮುಹಬ್ಬತ್ ಮೇಂನ್ ಧೋಲಿಯೇ ..." ಬಹಳ ಜನಪ್ರಿಯವಾದುದು. ಲತಾ ಮಂಗೇಶ್ಕರ್ ಹಾಡಿರುವ ಗೀತೆಯನ್ನು ಅದಾಲತ್ (ನ್ಯಾಯಾಲಯ) ಎಂಬ ಚಿತ್ರದಲ್ಲಿ ಬಳಸಲಾಗಿದೆ. ಒಬ್ಬ ವೇಶ್ಯೆಯ ಪಾತ್ರದಲ್ಲಿ ನರ್ಗಿಸ್ ಅಭಿನಯಿಸಿದ್ದಾರೆ. ಸಮಾಜದ ಅನ್ಯಾಯದಿಂದ ವೇಶ್ಯಾವೃತ್ತಿಗೆ ಬಂದು ಬಿದ್ದ ಹೆಣ್ಣಿನ ನೋವನ್ನು ಗೀತಕಾರ ರಾಜೇಂದ್ರಕೃಷ್ಣ ಈ ಗಜಲ್ ನಲ್ಲಿ ಬಹಳ ಕಲಾತ್ಮಕವಾಗಿ ಬಿಂಬಿಸಿದ್ದಾರೆ. ಮೂಲ ಚಿತ್ರಗೀತೆಯನ್ನು ಯೂ ಟ್ಯೂಬ್ ನಲ್ಲಿ ನೀವು ಕೇಳಬಹುದು.ಉರ್ದೂ ಸಾಹಿತ್ಯದಲ್ಲಿ ಗಜಲ್ ಬಹಳ ವಿಶಿಷ್ಟವಾದ ಕಾವ್ಯರೂಪ. ಎರಡೆರಡು ಸಾಲುಗಳ ಮೂರು-ನಾಲ್ಕು ಪದ್ಯಗಳಲ್ಲಿ ಮನಸ್ಸಿನ ಸೂಕ್ಷ್ಮವಾದ ಭಾವನೆಗಳನ್ನು ಹೇಳುವ ಕಲೆ ಗಜಲ್ ಕವಿಗೆ ಸಿದ್ಧಿಸಿರಬೇಕು. ಹಿಂದಿ ಚಿತ್ರಗಳಲ್ಲಿ ಪ್ರಸಿದ್ಧ ಉರ್ದೂ ಕವಿಗಳ ಗಜಲ್ ಗಳನ್ನು ಗೀತೆಗಳನ್ನಾಗಿ ಬಳಸಿಕೊಂಡಿರುವುದು ವಿಶೇಷ.
ಪ್ರಸ್ತುತ ಗಜಲ್ ಒಂದು ಹೆಣ್ಣಿನ ವ್ಯಸನವನ್ನು ಕುರಿತು ಹೇಳುತ್ತದೆ. ಇವಳು ತನ್ನ ಇಚ್ಛೆಗೆ ವಿರುದ್ಧವಾಗಿ ವೇಶ್ಯಾವೃತ್ತಿಗೆ ಇಳಿಯಬೇಕಾಗಿದೆ. ಅವಳಲ್ಲಿ ಪ್ರೇಮವನ್ನು ಹುಡುಕಿಕೊಂಡು ಬರುವ ಅನೇಕರಿದ್ದಾರೆ. ಅವಳ ಪ್ರೇಮವೆನ್ನುವುದು ಅವರ ಅಪೂರ್ಣ ಆಸೆಗಳನ್ನು ತೊಳೆಯುವ ಒಂದು ಸಾಧನ ಮಾತ್ರ. ಇದನ್ನು ಅವಳು ಬೇರಾರಿಗೂ ಹೇಳಲಾರಳು. ತನ್ನ ಮಾತ್ರಕ್ಕೆ ಸ್ವಗತವನ್ನು ಹೇಳಿಕೊಂಡು ದುಃಖಿಸುತ್ತಾಳೆ. ಎಲ್ಲರಂತೆ ಅವಳೂ ಸಂತೋಷವನ್ನು ಅರಸುತ್ತಾ ಹೊರಟಳು; ಆದರೆ ಅವಳ ಅದೃಷ್ಟ ಅವಳಿಗೆ ಮೋಸ ಮಾಡಿತು. ಪ್ರತಿದಿನ ಹೊಸದಾಗಿ ಅರಳಿ ಬಾಡುವ ತನ್ನ ಹೃದಯವೂ ಒಂದು ಹೂವೇ! ಆದರೆ ಅದು ಮುಳ್ಳಿನ ಶಯ್ಯೆಯ ಮೇಲೆ ಮಲಗಿದ ಹೂವು. ತನ್ನ ದುಃಖವನ್ನು ಅವಳು ತನ್ನೊಳಗೇ ಬಚ್ಚಿಟ್ಟುಕೊಂಡು ತುಟಿ ಹೊಲಿದುಕೊಳ್ಳಲೂ ಸಮಾಜ ಬಿಡುವುದಿಲ್ಲ. ಹೀಗಾಗಿ ಅವಳು ಬಾಯಿ ತೆರೆದು ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದಾಳೆ ...
ಮೂಲ ಗಜಲ್ - ರಾಜೇಂದ್ರ ಕೃಷ್ಣ
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಅಪೂರ್ಣ ಆಸೆಗಳ ಕಳಂಕ ತೊಳೆವ ಪ್ರೇಮವೆ!
ಕಣ್ಣೀರು ಸುರಿಸು ಸ್ವಗತ ಹೇಳಿಕೊಂಡು ತನ್ನಲೇ ...
ಮನೆಯಿಂದ ಹೊರಟು ನಿಂತೆ ಹುಡುಕಿಕೊಂಡು ನಲಿವನೇ
ಜೊತೆಯಾಯ್ತು ನೋವು, ನನ್ನ ದಾರಿ ಕಾಯುತಿದ್ದಿತೇ?
ನಿಜ, ಬಾಡಿರುವುದು ಹೃದಯವಿದು, ಆದರೂ ಹೂವೇ!
ಈ ನಿಮ್ಮ ನಲಿವಿಗಾಗಿ ಮುಳ್ಳಿನಲ್ಲಿ ಮಲಗಿದೆ!
ತುಟಿಯನ್ನು ಹೊಲಿದುಕೊಂಡರೂ ಮಾಡುವರು ದೂಷಣೆ
ನಿಜ, ಬಾಡಿರುವುದು ಹೃದಯವಿದು, ಆದರೂ ಹೂವೇ!
ಈ ನಿಮ್ಮ ನಲಿವಿಗಾಗಿ ಮುಳ್ಳಿನಲ್ಲಿ ಮಲಗಿದೆ!
ತುಟಿಯನ್ನು ಹೊಲಿದುಕೊಂಡರೂ ಮಾಡುವರು ದೂಷಣೆ
ಬಾಯನ್ನು ತೆರೆದು ಮುತ್ತು ಸುರಿಸು ಮೌನದ ಗೊಂಬೆ!
Hi Ravi kumar,
ಪ್ರತ್ಯುತ್ತರಅಳಿಸಿAlways with a good post, but it would be nice if you can give us the hindi version of this song..
Veena, here it is!
ಪ್ರತ್ಯುತ್ತರಅಳಿಸಿMovie/Album : अदालत (1958)
Music By : मदन मोहन
Lyrics By : राजेंद्र कृषण
Performed By : लता मंगेशकर
यूँ हसरतों के दाग़ मुहब्बत में धो लिये
खुद दिल से दिल की बात कही और रो लिये
घर से चले थे हम तो खुशी की तलाश में
ग़म राह में खड़े थे वही साथ हो लिये
खुद दिल से...
मुरझा चुका है फिर भी ये दिल फूल ही तो है
अब आप की ख़ुशी से काँटों में सो लिये
खुद दिल से...
होंठों को सी चुके तो ज़माने ने ये कहा
ये चुप सी क्यों लगी है अजी कुछ तो बोलिये
खुद दिल से...
The Hindi lyrics are courtesy of:
ಪ್ರತ್ಯುತ್ತರಅಳಿಸಿhttp://hindilyricspratik.blogspot.in/2011/03/yun-hasraton-ke-daag-lata-mangeshkar.html