ಹೂವಿನ ಬಯಕೆ

ಮೂಲ ಹಿಂದಿ ಪದ್ಯ: ಮಾಖನ್ ಲಾಲ್ ಚತುರ್ವೇದಿ 

ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 



ಮುಡಿಯುವ ಆಭರಣವಾಗಲೇ ದೇವಕನ್ಯೆಯ 
ಜಡೆಯಲ್ಲಿ? ಇಲ್ಲ,  ಆ ಬಯಕೆ ನನಗಿಲ್ಲ
ಮದುಮಗನು ನಲ್ಲೆಗರ್ಪಿಸುವ ಹಾರಕ್ಕೆ 
ಪದಕವಾಗುವ ತವಕ ನನ್ನೊಳಗಿಲ್ಲ
ಕೊಂಡೊಯ್ದು ಇರಿಸದಿರು ಗೋರಿಕಲ್ಲಿನ ಮೇಲೆ 
ಹಿಂದೆ ಎಂದೋ ಆಳಿ ಅಳಿದ ರಾಜನಿಗೆ!
ಮಂದಿರದ ಮೂರ್ತಿಶಿಲೆ ಮೇಲಿಡದಿರು, ನನಗಿಲ್ಲ 
ಒಂದೆರಡು ಕ್ಷಣದ ಧನ್ಯತೆಯ ಬಯಕೆ!
ಕೊಂಡೊಯ್ದು ನನ್ನನ್ನು ಓ ವನಮಾಲಿ! ಎಸೆದುಬಿಡು 
ಬಂಧು ಸೈನಿಕರು ಮುನ್ನುಗ್ಗುವ   ಹಾದಿಯಲ್ಲಿ 
ಇಂದು ತಾಯ್ ಭೂಮಿ ರಕ್ಷಣೆಗೆ ಹೊರಟವರ 
ಪದತಲದಲೆನ್ನ  ಬಾಳಿನ ಅರ್ಥ ಹೊಮ್ಮಿ ಬರಲಿ!

Translation by C.P. Ravikumar of a Hindi Poem by Makhanlal Chaturvedi

[ಚಿತ್ರ: ಶ್ರೀನಿವಾಸನ್ ಮಾರ್ಗಸಹಾಯಂ]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)