ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - 2
ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಎರಡನೇ ಸಾನೆಟ್. ಮೊದಲ ಸಾನೆಟ್ಟಿನ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಮೊದಲ ಸಾನೆಟ್ಟಿನಲ್ಲಿ ಕವಯಿತ್ರಿಗೆ ಅವಳ ಪ್ರೇಮಿಯು ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಇದನ್ನು ಕೇಳಿದಾಗ ಕವಯಿತ್ರಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಈ ಸಾನೆಟ್ಟಿನಲ್ಲಿ ಚಿತ್ರಿತವಾಗಿವೆ. ಪ್ರಿಯಕರನ ಪ್ರೇಮನಿವೇದನೆಯಿಂದ ಅವಳಿಗೆ ಜೀವನದಲ್ಲಿ ಮತ್ತೊಮ್ಮೆ ಉತ್ಸಾಹ ಮೂಡಿದೆ. ಅವಳಿಗೆ ದೇವರೇ ಬಂದು (ಜೀವನ)ಪ್ರೇಮವನ್ನು ಬೋಧಿಸಿದಂತೆ ತೋರುತ್ತದೆ. ದೈಹಿಕ ನೋವುಗಳನ್ನು ಕುರಿತು ಅವಳಿಗೆ ನೆನಪಾಗುತ್ತದೆ. ಅದು ಅವಳಿಗೆ ತಗುಲಿದ್ದ ಶಾಪವೆಂದು ಕವಯಿತ್ರಿಗೆ ಅನ್ನಿಸುತ್ತದೆ. ಇದೇ ಕಾರಣ ತನ್ನ ಪ್ರಿಯಕರನನ್ನು ನೋಡಲು ಕೂಡಾ ಆವಳಿಗೆ ಸಾಧ್ಯವಾಗಿರಲಿಲ್ಲ. ಈ ದೈಹಿಕ ಬಾಧೆಗಳ ಕಾರಣ ತನ್ನ ಪ್ರಾಣವೇ ಹೋಗಿದ್ದರೂ ಪ್ರಿಯಕರನನ್ನು ನೋಡದ ಬಾಧೆಗಿಂತ ಅದು ಹೆಚ್ಚಲ್ಲ ಎಂದು ಕವಯಿತ್ರಿಗೆ ಅನ್ನಿಸುತ್ತದೆ. ಇದುವರೆಗೆ ದೈವವೇ ತನಗೆ ಪ್ರೇಮವನ್ನು ನಿರಾಕರಿಸಿತ್ತೇ? ಈಗ ತನಗೆ ಅದು ಸಿಕ್ಕಿದ ಮೇಲೆ ಯಾವುದೇ ಶಕ್ತಿಯೂ ಪ್ರಿಯಕರನಿಂದ ತನ್ನನ್ನು ಬೇರೆ ಮಾಡಲಾಗದು! ಕೊನೆಗೊಮ್ಮೆ ಸ್ವರ್ಗವೇ ಇಬ್ಬರ ನಡುವೆ ಬಂದರೂ ಅವಸರದಲ್ಲಿ ಮಂತ್ರಗಳನ್ನು ಪಠಿಸಿಬಿಟ್ಟರಾಯಿತು ಎಂಬುದು ಅವಳ ತರ್ಕ!
ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು
ಭಗವಂತನ ಸೃಷ್ಟಿಯಲ್ಲಿ ಮೂವರೇ - ಆಡಿದ ನೀನು,
ಕೇಳಿಸಿಕೊಂಡ ನಾನು, ಮತ್ತು ಸಾಕ್ಷಾತ್ ಆ ದೇವರು!
ಅವನೇ ನನಗೆ ನುಡಿದಂತಾಯ್ತು ನೀನು ನುಡಿದದ್ದನ್ನು!
ನೋಡಲಾರದ ಹಾಗೆ ನಿನ್ನ ರೂಪವನ್ನು ಯಾವುದೋ ಶಾಪ
ಕವಿದುಕೊಂಡಿತ್ತು ನನ್ನ ಕಣ್ಗಳಿಗೆ; ಬಂದೊದಗಿದ್ದರೆ ಸಾವು
ನಿನ್ನನ್ನು ನೋಡುವ ಮುನ್ನವೇ ಘೋರ ಮೃತ್ಯು ಕೂಪ-
ವೂ ಹೆಚ್ಚಿನದಲ್ಲ ಹೋಲಿಸಿದರೆ ನಿನ್ನನ್ನು ಕಾಣಲಾಗದ ನೋವು!
ದೈವದ ನಿರಾಕರಣಕ್ಕಿಂತ ಮಿಗಿಲಾದುದಿಲ್ಲ ಓ ಬಂಧು!
ಬೇರ್ಪಡಿಸಲಾಗದು ನಮ್ಮನ್ನುಯಾವುದೇ ಮಾನವ ವ್ಯಕ್ತಿಗೂ,
ಬಗ್ಗಿಸದು ಬಿರುಗಾಳಿ, ಮಾರ್ಪಡಿಸದಾವುದೇ ಸಿಂಧು,
ಹಿಡಿದ ಕೈಗಳನ್ನು ಬೇರ್ಪಡಿಸಲಾಗದು ಬೆಟ್ಟದಂಥ ಶಕ್ತಿಗೂ,
ಕೊನೆಗೊಮ್ಮೆ ಸ್ವರ್ಗವೇ ಬಂದರೂ ನಮ್ಮಿಬರ ನಡುವೆ
ಪಠಿಸಿಬಿಡುವ ಮಂತ್ರ ತಾರೆಗಳು ಕಣ್ಮಿಟುಕಿಸುವ ಮೊದಲೇ!
(c) 2017, ಸಿ. ಪಿ. ರವಿಕುಮಾರ್

Add caption |

ಪ್ರತ್ಯುತ್ತರಅಳಿಸಿBut only three in all God’s universe
Have heard this word thou hast said–Himself,
beside
Thee speaking, and me listening! and replied
One of us … that was God … and laid the curse
So darkly on my eyelids, as to amerce
My sight from seeing thee–that if I had died,
The death-weights, placed there, would have
signified
Less absolute exclusion. “Nay” is worse
From God than from all others, O my friend!
Men could not part us with their worldly jars,
Nor the seas change us, nor the tempests bend;
Our hands would touch for all the mountain-bars:
And, heaven being rolled between us at the end,
We should but vow the faster for the stars.