ಬೇಕಾದಷ್ಟು

 ಬೇಕಾದಷ್ಟು



ಮೂಲ: ಏಮಿ ಶ್ಮಿಟ್ 

ಅನುವಾದ: ಸಿ ಪಿ ರವಿಕುಮಾರ್

ಕೇಕ್ ತಯಾರಿಸಲು ಕಿತ್ತಳೆಯನ್ನು ಹೆರೆಯುವಾಗ
ಒಂಟಿತನ ಬಾಧಿಸುವುದು ಸಾಧ್ಯವಿಲ್ಲ ಯಾರನ್ನೂ.
ಮೆತ್ತನೆಯ ಸಿಪ್ಪೆಯನ್ನು ಉಜ್ಜಿದಾಗ ಮಣೆಗೆ 
ಇಡೀ ಕೋಣೆಯನ್ನು ತುಂಬಿಕೊಳ್ಳುವುದು ಹಣ್ಣು.
ಸುತ್ತಲೂ ಒಮ್ಮೆ ನೋಡಿಕೊಳ್ಳಿ:
ಅಗತ್ಯಕ್ಕಿಂತಲೂ ಹೆಚ್ಚೇ ಇದೆ ನಿಮ್ಮಲ್ಲಿ ಎಲ್ಲಾ.
ಅದು ಸದಾಕಾಲವೂ ಹಾಗೇ ಇತ್ತು,
ಇದುವರೆಗೂ ಮನವರಿಕೆ ಆಗಿರಲಿಲ್ಲ.

ಕಾಮೆಂಟ್‌ಗಳು