ಮಳೆ ಬರುವ ಮುನ್ನವೇ
ಕವಿತೆ ಓದುವ ಮುನ್ನ ... "ಮಳೆ ಬರುವ ಕಾಲಕ್ಕs ಒಳಗ್ಯಾಕs ಕುಳಿತೇವೋ, ಬಾ ಗೆಣೆಯ ಜಳಕಾs ಮಾಡೋಣs! ನಾವೂನೂ ಮೋಡಗಳ ಆಟ ಆಡೋಣs" ಎಂದರು ನಮ್ಮ ಬೇಂದ್ರೆ. ಮಳೆಗೆ ಮಲೆನಾಡಿನವರು, ಕರಾವಳಿ ಪ್ರದೇಶದಲ್ಲಿರುವವರು ಹೆದರುವುದಿಲ್ಲ. ಆದರೆ ನಗರದ ಜನರಿಗೆ ಮಳೆಯೆಂದರೆ ಗಾಬರಿ! ದೇವಲೋಕದ ಜೊತೆಗೆ ಭೂಮಿಯನ್ನು ಒಂದಷ್ಟು ಕಾಲ ಕನೆಕ್ಟ್ ಮಾಡುವ ಮಳೆಗೆ ನಾವು ಯಾಕೆ ಹೆದರುತ್ತೇವೆ? ಈ ಪ್ರಶ್ನೆಯನ್ನು ಗುಲ್ಜಾರ್ ಈ ಕವಿತೆಯಲ್ಲಿ ಕೇಳುತ್ತಾರೆ .... ಮೂಲ ಹಿಂದಿ ಕವಿತೆ: ಗುಲ್ಜಾರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾರಿ ಗೋಡೆಗಳ ಬಿರುಕುಗಳನ್ನು ಮುಚ್ಚಿ ಛಾವಣಿಯ ಮೇಲೆ ಸುಣ್ಣ ಸಾರಿಸಿ ಸಾಲದ್ದಕ್ಕೆ ನಡೆಯುತ್ತಿದೆ ಕೊಡೆಯ ರಿಪೇರಿ ಹೊರಗಡೆ ತೆರೆಯುವ ಕಿಟಕಿಯ ಮೇಲೆ ಚಜ್ಜ ಹಾಕಿಸಿದ್ದಾಯ್ತು ಮರಳು ಮತ್ತಿನ್ನೇನೋ ಕುಟ್ಟಿ ಗಟ್ಟಿ ಮಾಡುತ್ತಿದ್ದಾರೆ ಮೇನ್ ರೋಡಿನಿಂದ ಮನೆವರೆಗೆ ಬರುವ ಕಿರುದಾರಿ ಇಲ್ಲದಿದ್ದರೆ ನೋಡಿ ಹಳ್ಳಗಳಲ್ಲಿ ತುಂಬಿಕೊಂಡು ನೀರು ಉಟ್ಟ ಬಟ್ಟೆ ಬೂಟುಗಳಿಗೆಲ್ಲ ಕೆಂಪು ಕಸರಿನ ರಾಡಿ ಸದ್ಯ ಎಲ್ಲಾದರೂ ತೊಡರೀತು ಸಪ್ತ ವರ್ಣ! ನೆಂದರೇನು ಗತಿ ಮೋಡದಲ್ಲಿ! ಪಾರಾಗುತ್ತ ಶ್ರಾವಣದಿಂದ ಅಂತೂ ಇಂತೂ ಬದುಕೋಣ ಹೇಗಾದರೂ ಮಾಡಿ ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾ...