ಗಾಜಿನ ಬೀರುಗಳಿಂದ ಇಣುಕುತ್ತವೆ ಪುಸ್ತಕ

ಮೂಲ ಹಿಂದಿ ಕವಿತೆ: ಗುಲ್ಜಾರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 


ಪುಸ್ತಕಗಳೊಂದಿಗೆ ಒಂದು ರಕ್ತ ಸಂಬಂಧವಿತ್ತಲ್ಲ,
ಕಡಿದುಹೋಗಿದೆ

ಒಂದು ಕಾಲ ಇತ್ತು:
ಎದೆಯ ಮೇಲಿಟ್ಟುಕೊಂಡು ಮಲಗಿಕೊಳ್ಳುವುದೇನು
ಮಡಿಲಲ್ಲಿಟ್ಟುಕೊಂಡು ಮೆರೆಸುವುದೇನು
ಕೆಲವೊಮ್ಮೆ ಮಂಡಿಗಳನ್ನೇ ಮಂದಲಗೆ ಮಣೆ ಮಾಡಿಕೊಂಡು
ನತಮಸ್ತಕರಾಗಿ ಓದುತ್ತಿದ್ದೆವಲ್ಲ, ಹಣೆ ಮುಟ್ಟಿಸಿಕೊಂಡು

ತಿಳುವಳಿಕೆಗೇನು ಸಿಕ್ಕುವುದು ಹೇಗೂ
ಆದರೆ
ಸಿಕ್ಕುತ್ತಿದ್ದವಲ್ಲ
ಹೂವಿನ ಒಣಗಿದ ಪಕಳೆ
ಘಮ್ಮೆನ್ನುವ ಹಾಳೆ
ಪುಸ್ತಕ ಕೇಳಿ ಪಡೆಯುವ ನೆಪದಲ್ಲಿ,
ಬೀಳುವ ಎತ್ತಿಕೊಡುವ ನೆಪದಲ್ಲಿ
ಹುಟ್ಟಿಕೊಳ್ಳುತ್ತಿದ್ದವಲ್ಲ ಸಂಬಂಧಗಳು
ಅವುಗಳಿಗೆ ಬಹುಶಃ
ಇನ್ನು ಇಲ್ಲ ಅವಕಾಶ

Translation of a Hindi Poem by Gulzar

(ಈ-ಪುಸ್ತಕಗಳ ಕಾಲ ಬರುವುದಕ್ಕೆ ಬಹಳ ಹಿಂದೆಯೇ ಗುಲ್ಜಾರ್ ಈ ಕವಿತೆ ಬರೆದಿದ್ದರು! ಡೌನ್ ಲೋಡ್ ಮಾಡಿಕೊಂಡು ಪುಸ್ತಕ ಓದುವಾಗ ನಮಗೆ ಅದರಲ್ಲಿ ನವಿಲುಗರಿಯಾಗಲಿ, ಹೂವಿನ ಪಕಳೆಗಳಾಗಲಿ ದೊರೆಯುವುದಿಲ್ಲ! ಯಾರೋ ಪುಸ್ತಕದ ಅಂಚಿನಲ್ಲಿ  ಗೀಚಿದ ಬರಹ ನಮ್ಮನ್ನು ಕಾಡುವುದಿಲ್ಲ. ನಶಿಸುತ್ತಿರುವ ಮಾನವ ಸಂಬಂಧಗಳನ್ನು ಕುರಿತು ಈ ಕವಿತೆ ಸೂಕ್ಷ್ಮವಾಗಿ ವ್ಯಾಖ್ಯಾನ ಮಾಡುತ್ತದೆ. ಇದರಿಂದ ಸ್ಫೂರ್ತಿ ಪಡೆದವರು ಯಾರಾದರೂ ಹೊಸ ಬಗೆಯ ಈ-ಪುಸ್ತಕ ಅಪ್ಲಿಕೇಶನ್ ತಯಾರಿಸಬಹುದೇನೋ!)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)